* ಆಪರೇಷನ್ ಸಿಂಧೂರ ಬಳಿಕ ಪಂಜಾಬ್ನ ಗಡಿಯ ಮೂರೂ ಚೆಕ್ಪೋಸ್ಟ್ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಗಡಿ ಭದ್ರತಾ ಪಡೆಯ ಬೀಟಿಂಗ್ ರಿಟ್ರೀಟ್ (ಕವಾಯತ್) ಆರಂಭವಾಗಿದೆ.* ಪಂಜಾಬ್ನ ಅಟ್ಟಾರಿ-ವಾಘಾ, ಹುಸೇನಿವಾಲಾ ಹಾಗೂ ಸದ್ಕಿ ಚೆಕ್ಪೋಸ್ಟ್ಗಳ ಧ್ವಜ ಇಳಿಸುವ ಕಾರ್ಯಕ್ರಮ (ಬೀಟಿಂಗ್ ರಿಟ್ರೀಟ್) ಇಂದಿನಿಂದ ಪುನಃ ಆರಂಭವಾಗಲಿದೆ ಎಂದು ಬಿಎಸ್ಎಫ್ ಪ್ರಕಟಿಸಿದೆ.* ಮೇ 9 ರಿಂದ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಜೆ 6 ಗಂಟೆಯಿಂದ ಪುನರಾರಂಭವಾಗಿದ್ದು, ಬುಧವಾರದಿಂದ ಸಾರ್ವಜನಿಕ ಪ್ರವೇಶಕ್ಕೂ ಮುಕ್ತವಾಗಲಿದೆ.* ಭಾರತ-ಪಾಕಿಸ್ತಾನ ಗಡಿಯಲ್ಲಿ ನಡೆಯುವ ಈ ಕಾರ್ಯಕ್ರಮ ಭಾರತೀಯ ಸೇನೆಯ ಶಿಸ್ತು ಹಾಗೂ ಸಾಂಸ್ಕೃತಿಕ ಹೆಮ್ಮೆಯನ್ನು ತೋರಿಸುತ್ತವೆ.* ಬಿಎಸ್ಎಫ್ ಮತ್ತು ಪಾಕಿಸ್ತಾನಿ ಸೇನೆ ಮುಖಾಮುಖಿಯಾಗಿ ಈ ಕವಾಯತನ್ನು ನಡೆಸುತ್ತವೆ. ಈ ಧ್ವಜ ಇಳಿಸುವ ಕವಾಯತನ್ನು ದಿನದಿಂದ ದಿನಕ್ಕೆ ನೂರಾರು ಜನರು ವೀಕ್ಷಿಸುತ್ತಾರೆ.* ಈ ಬಾರಿ ಪುನರಾರಂಭದ ಹಿನ್ನೆಲೆ ಪ್ರವಾಸಿಗರ ನಿರ್ವಹಣೆಗೆ ಬೇಕಾದ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂದಿನ ವರ್ಷಗಳಲ್ಲಿ ಭದ್ರತಾ ಅಲರ್ಟ್ಗಳು ಹಾಗೂ ಸಾಂಕ್ರಾಮಿಕ ರೋಗಗಳ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.