* ಪಂಜಾಬ್ ಆಹಾರ ಸಂಸ್ಕರಣಾ ಇಲಾಖೆ ಅಮೃತಸರದ ಪ್ರಸಿದ್ಧ ತಂದೂರಿ ಬ್ರೆಡ್ ಅಮೃತಸರಿ ಕುಲ್ಚಾಗೆ ಭೌಗೋಳಿಕ ಸೂಚನೆ (GI) ಟ್ಯಾಗ್ ಪಡೆಯಲು ಮುಂದಾಗಿದೆ. ಇದರಿಂದ ಅಮೃತಸರಿನ ಆಹಾರ ಪರಂಪರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ.* ಗುರು ನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಕುಲ್ಚಾ, ಮುರಬ್ಬ, ಉಪ್ಪಿನಕಾಯಿ, ಬಾಸ್ಮತಿ ಅಕ್ಕಿ, ಜೇನುತುಪ್ಪ ಮುಂತಾದ ಉತ್ಪನ್ನಗಳ ಪ್ರಕ್ರಿಯೆ, ಬ್ರಾಂಡಿಂಗ್ ಹಾಗೂ ರಫ್ತು ಸಾಧ್ಯತೆಗಳನ್ನು ಚರ್ಚಿಸಲಾಯಿತು.* ಪ್ರಧಾನ ಕಾರ್ಯದರ್ಶಿ ರಾಖೀ ಗುಪ್ತಾ ಭಂಡಾರಿ, GI ಟ್ಯಾಗ್ ಹೊಸ ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.* ಮೈದಾ ಹಿಟ್ಟಿನಿಂದ ತಯಾರಿಸಲ್ಪಡುವ ಈ ತಂದೂರಿ ರೊಟ್ಟಿಗೆ ಆಲೂಗಡ್ಡೆ, ಹೂಕೋಸು, ಪನ್ನೀರ್, ಈರುಳ್ಳಿ ಅಥವಾ ಮಾಂಸ ಹೂರಣ ಹಾಕಲಾಗುತ್ತದೆ. ಮೇಲೆ ಬೆಣ್ಣೆ ಅಥವಾ ತುಪ್ಪ ಹಚ್ಚಿ ಚಟ್ಟಿ ಮತ್ತು ಉಪ್ಪಿನಕಾಯಿ ಜೊತೆ ನೀಡಲಾಗುತ್ತದೆ. ಅಮೃತಸರಿನ ನೀರೇ ಇದರ ವಿಶಿಷ್ಟ ರುಚಿಗೆ ಕಾರಣವೆಂದು ನಂಬಲಾಗುತ್ತದೆ.* ಜಿಐ ಟ್ಯಾಗ್ ಒಂದು ಪ್ರದೇಶಕ್ಕೆ ಮಾತ್ರ ಸೇರಿದ ಉತ್ಪನ್ನಗಳಿಗೆ ನೀಡುವ ಗುರುತು. ಈಗಾಗಲೇ ಡಾರ್ಜಿಲಿಂಗ್ ಚಹಾ, ತಿರುಪತಿ ಲಡ್ಡು, ಗೋವಾ ಫೆನಿ ಮುಂತಾದವು GI ಟ್ಯಾಗ್ ಪಡೆದಿವೆ. ಪಂಜಾಬ್ನಲ್ಲಿ ಇದುವರೆಗೆ ಫುಲ್ಕಾರಿ ಕಸೂತಿ ಮತ್ತು ಬಾಸ್ಮತಿ ಅಕ್ಕಿಗೆ ಮಾತ್ರ GI ಮಾನ್ಯತೆ ದೊರಕಿದೆ.