* ಕರ್ನಾಟಕ ರಾಜ್ಯದಲ್ಲಿ ಪ್ರತಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತಿಗಳಿಗೆ ತಮ್ಮದೇ ಆದ ಪ್ರತ್ಯೇಕ ಲಾಂಛನವನ್ನು ರೂಪಿಸಿ ಬಳಸಲು ಅವಕಾಶ ನೀಡಲಾಗಿದೆ.* ಇದು ಭಾರತದಲ್ಲಿ ಮೊದಲ ಬಾರಿ ಪಂಚಾಯತ್ಗಳಿಗೆ ಪ್ರತ್ಯೇಕ ಲಾಂಛನ ನೀಡುತ್ತಿರುವ ರಾಜ್ಯವಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಲಾಂಛನ ವಿನ್ಯಾಸ ಮತ್ತು ಬಳಕೆಯ ಬಗ್ಗೆ ಮಾರ್ಗಸೂಚಿಗಳನ್ನೂ ನೀಡಲಾಗಿದೆ.* ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕಾರ, ಪ್ರತಿಯೊಂದು ಗ್ರಾಮ ಪಂಚಾಯತಿಗೂ ಸ್ವಾಯತ್ತ ಅಧಿಕಾರವಿದೆ.* ಈ ಶಾಶ್ವತತೆ ಹಿನ್ನಲೆಯಲ್ಲಿ ಲಾಂಛನ ಮತ್ತು ಮೊಹರ ಬಳಸಲು ಅವಕಾಶ ನೀಡಲಾಗಿದೆ. ಇಲಾಖೆಯು ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿರುವುದಾಗಿ ಖರ್ಗೆ ತಿಳಿಸಿದ್ದಾರೆ.* ಪಂಚಾಯತ್ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ತಮ್ಮ ಅಧಿಕಾರದ ಅವಧಿಯಲ್ಲಿ ಮಾತ್ರ ತಮ್ಮ ಅಧಿಕೃತ ವಿಸಿಟಿಂಗ್ ಕಾರ್ಡ್ಗಳಲ್ಲಿ ಈ ಲಾಂಛನವನ್ನು ಬಳಸಬಹುದಾಗಿದೆ.* ನಿವೃತ್ತ ಸದಸ್ಯರು, ಮಾಜಿ ಜನಪ್ರತಿನಿಧಿಗಳು, ಸಿಬ್ಬಂದಿಗೆ ಮತ್ತು ಇತರ ಸಂದರ್ಭಗಳಲ್ಲಿ ಈ ಲಾಂಛನ ಬಳಕೆಯ ಮೇಲೆ ನಿರ್ಬಂಧ ಹೇರಲಾಗಿದೆ.* ಈ ಹಿಂದೆ ನಡೆದ ಮಹಾ ಒಕ್ಕೂಟದ ಸಭೆಯಲ್ಲಿ ಲಾಂಛನ ಬಳಕೆ ಕುರಿತ ಭರವಸೆ ನೀಡಲಾಗಿದ್ದು, ಇದೀಗ ಅದು ಅಧಿಕೃತ ಆದೇಶ ರೂಪದಲ್ಲಿ ಜಾರಿಗೆ ಬಂದಿದೆ.