* ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ 5 ನಗರಪಾಲಿಕೆಗಳನ್ನು ರಚಿಸಿದೆ. ಇದರಿಂದ ಬೆಂಗಳೂರು ಆಡಳಿತದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ.* ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ಸಮಿತಿಯ ಶಿಫಾರಸಿನಂತೆ ಜಿಬಿಎ ಅಡಿಯಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ಎಂಬ ಐದು ನಗರಪಾಲಿಕೆಗಳನ್ನು ಸ್ಥಾಪಿಸಲಾಗಿದೆ.* ಸರ್ಕಾರವು ಪ್ರತಿ ಪಾಲಿಕೆಗೆ ಆಯುಕ್ತರು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್ರನ್ನು ನೇಮಿಸಿದೆ.* ಜಿಬಿಎ ಕೇಂದ್ರ ಕಚೇರಿಗೆ ತಾಂತ್ರಿಕ ಮತ್ತು ಯೋಜನಾ ವಿಭಾಗಗಳಿಗೂ ಮುಖ್ಯ ಎಂಜಿನಿಯರ್ಗಳನ್ನು ನಿಯೋಜಿಸಲಾಗಿದೆ.* ಮುಖ್ಯ ಆಯುಕ್ತರಾಗಿ ಎಂ. ಮಹೇಶ್ವರ್ ರಾವ್ ಹಾಗೂ ವಿಶೇಷ ಆಯುಕ್ತರಾಗಿ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಹರೀಶ್ ಕುಮಾರ್ ಮತ್ತು ಪ್ರೀತಿ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ.* ಪ್ರತಿ ವಲಯಕ್ಕೆ ಅಧೀಕ್ಷಕ ಎಂಜಿನಿಯರ್ಗಳ ನಿಯೋಜನೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳ ನೇಮಕಾತಿ ಪ್ರಕ್ರಿಯೆ ಜಾರಿಗೊಳ್ಳಲಿದೆ.