* ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಯುವ ಲೇಖಕರಿಗೆ ಮಾರ್ಗದರ್ಶನ ನೀಡುವ PM-YUVA 3.0 ಯೋಜನೆಯನ್ನು ಪ್ರಾರಂಭಿಸಿದೆ.* ಲೇಖಕ ಮಾರ್ಗದರ್ಶನ ಕಾರ್ಯಕ್ರಮವು 30 ವರ್ಷದೊಳಗಿನ ಯುವ ಲೇಖಕರಿಗೆ ಓದು, ಬರವಣಿಗೆ ಮತ್ತು ಪುಸ್ತಕ ಸಮಾಜವನ್ನು ಉತ್ತೇಜಿಸಲು ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ.* PM-YUVA 3.0 ಕಾರ್ಯಕ್ರಮವು 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ ಯುವ ಮತ್ತು ಮಹತ್ವಾಕಾಂಕ್ಷಿ ಲೇಖಕರನ್ನು ಉತ್ತೇಜಿಸುವ ಉದ್ದೇಶ ಹೊಂದಿದ್ದು, ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಗಳ ಕುರಿತು ಬರೆಯಬಲ್ಲ ಬರಹಗಾರರ ಸಮುದಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮೊದಲ ಎರಡು ಸುತ್ತುಗಳ ಯಶಸ್ಸಿನ ನಂತರ, ಈ ಹೊಸ ಆವೃತ್ತಿ ಆರಂಭಿಸಲಾಗಿದೆ.* ಮಾರ್ಚ್ 11, 2025ರಂದು ಘೋಷಿಸಿದ ಈ ಯೋಜನೆಯಡಿ, "ಅಖಿಲ ಭಾರತ ಸ್ಪರ್ಧೆ" ಮೂಲಕ 50 ಯುವ ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆ ಮಾರ್ಚ್ 11 – ಏಪ್ರಿಲ್ 10, 2025 ರವರೆಗೆ mygov.in ನಲ್ಲಿ ನಡೆಯಲಿದೆ. ಆಯ್ಕೆಯಾದ ಲೇಖಕರನ್ನು ಮೇ ಅಥವಾ ಜೂನ್ 2025 ರಲ್ಲಿ ಪ್ರಕಟಿಸಲಾಗುವುದು.ಲೇಖಕರ ಆಯ್ಕೆ ಮತ್ತು ಥೀಮ್ :- ಭಾರತೀಯ ಡಯಾಸ್ಪೊರಾ ಮತ್ತು ರಾಷ್ಟ್ರ ನಿರ್ಮಾಣ (10 ಲೇಖಕರು)- ಭಾರತೀಯ ಜ್ಞಾನ ವ್ಯವಸ್ಥೆ (20 ಲೇಖಕರು)- ಆಧುನಿಕ ಭಾರತದ ನಿರ್ಮಾಪಕರು (1950–2025) (20 ಲೇಖಕರು)* ಆಯ್ಕೆಯಾದ ಲೇಖಕರು ಜೂನ್ 30 – ಡಿಸೆಂಬರ್ 30, 2025 ರವರೆಗೆ ಮಾರ್ಗದರ್ಶನ ಪಡೆಯಲಿದ್ದಾರೆ. 2026ರ ನವದೆಹಲಿ ವಿಶ್ವ ಪುಸ್ತಕ ಮೇಳದ ವೇಳೆ "PM-YUVA 3.0" ಶಿಬಿರ ನಡೆಯಲಿದೆ.* ಈ ಯೋಜನೆಯ ಉದ್ದೇಶ ಭಾರತೀಯ ವಲಸಿಗರ ರಾಷ್ಟ್ರ ನಿರ್ಮಾಣದ ಪಾತ್ರ, ಭಾರತೀಯ ಜ್ಞಾನ ಪರಂಪರೆಯ ಮಹತ್ವ, ಮತ್ತು ಆಧುನಿಕ ಭಾರತದ ನಿರ್ಮಾಣದಲ್ಲಿ ಪ್ರಮುಖ ಬರಹಗಾರರ ಕೊಡುಗೆ ವಿಸ್ತರಿಸುವ ಹೊಸ ಪೀಳಿಗೆಯ ಲೇಖಕರನ್ನು ಉತ್ತೇಜಿಸುವುದು.* ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಈ ಯೋಜನೆಯನ್ನು ಶಿಕ್ಷಣ ಸಚಿವಾಲಯದ ನಿರ್ದೇಶನದಡಿಯಲ್ಲಿ ಅನುಷ್ಠಾನಗೊಳಿಸುತ್ತದೆ. 'ಏಕ್ ಭಾರತ್ ಶ್ರೇಷ್ಠ ಭಾರತ' ಅಭಿಯಾನದಡಿ ಈ ಪುಸ್ತಕಗಳನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುವುದು.