Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಿಶ್ವ ದಾಖಲೆ ಬರೆದ ಪ್ರಧಾನಿ ಮೋದಿ: ಇನ್ಸ್ಟಾಗ್ರಾಂನಲ್ಲಿ 10 ಕೋಟಿ ಫಾಲೋವರ್ಸ್ ಗಳಿಸಿದ ವಿಶ್ವದ ಮೊದಲ ನಾಯಕ!
Authored by:
Heena Sheregar
Date:
27 ಫೆಬ್ರುವರಿ 2026
➤ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ
10 ಕೋಟಿ (100 Million)
ಫಾಲೋವರ್ಗಳನ್ನು ಹೊಂದಿದ ವಿಶ್ವದ ಮೊತ್ತಮೊದಲ ರಾಜಕೀಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಫೆಬ್ರವರಿ 26, 2026 ರಂದು ಈ ಮಹತ್ವದ ಮೈಲಿಗಲ್ಲನ್ನು ತಲುಪುವ ಮೂಲಕ, ಡಿಜಿಟಲ್ ಲೋಕದಲ್ಲಿ ತಮ್ಮ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
➤
ವಿಶ್ವ ನಾಯಕರ ನಡುವೆ ಮೋದಿ ನಂಬರ್ 1:
ಇನ್ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಜಾಗತಿಕ ಮಟ್ಟದ ಇತರ ಪ್ರಬಲ ನಾಯಕರಿಗಿಂತ ಅತಿ ಹೆಚ್ಚು ಪಟ್ಟು ಹೆಚ್ಚಿದೆ. ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಎರಡರಷ್ಟು ಹೆಚ್ಚು ಫಾಲೋವರ್ಗಳನ್ನು ಮೋದಿ ಹೊಂದಿದ್ದಾರೆ.
ವಿಶ್ವದ ಪ್ರಮುಖ ನಾಯಕರ ಇನ್ಸ್ಟಾಗ್ರಾಂ ಫಾಲೋವರ್ಸ್ ವಿವರ:
ನರೇಂದ್ರ ಮೋದಿ - ಭಾರತ - 10 ಕೋಟಿ (100 Million)
ಫಾಲೋವರ್ಸ್
ಡೊನಾಲ್ಡ್ ಟ್ರಂಪ್ - ಅಮೆರಿಕ - 4.32 ಕೋಟಿ
ಫಾಲೋವರ್ಸ್
ಪ್ರಬೋವೊ ಸುಬಿಯಾಂಟೊ - ಇಂಡೋನೇಷ್ಯಾ - 1.5 ಕೋಟಿ
ಫಾಲೋವರ್ಸ್
ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ - ಬ್ರೆಜಿಲ್ - 1.44 ಕೋಟಿ
ಫಾಲೋವರ್ಸ್
ರೆಸೆಪ್ ತಯ್ಯಿಪ್ ಎರ್ಡೋಗನ್ - ಟರ್ಕಿ - 1.16 ಕೋಟಿ
ಫಾಲೋವರ್ಸ್
ಜೇವಿಯರ್ ಮಿಲೈ - ಅರ್ಜೆಂಟೀನಾ - 64 ಲಕ್ಷ
ಫಾಲೋವರ್ಸ್
➤ ಕೇವಲ ಜಾಗತಿಕವಾಗಿ ಮಾತ್ರವಲ್ಲದೆ, ದೇಶೀಯವಾಗಿಯೂ ಮೋದಿ ಅವರ ಡಿಜಿಟಲ್ ಹವಾ ಜೋರಾಗಿದೆ. ಭಾರತದ ಇತರ ರಾಜಕಾರಣಿಗಳಿಗೆ ಹೋಲಿಸಿದರೆ ಮೋದಿ ಬಹಳ ಮುಂದಿದ್ದಾರೆ.
ಯೋಗಿ ಆದಿತ್ಯನಾಥ್:
1.61 ಕೋಟಿ ಫಾಲೋವರ್ಸ್ (ಎರಡನೇ ಸ್ಥಾನ).
ರಾಹುಲ್ ಗಾಂಧಿ:
ಸುಮಾರು 1.26 ಕೋಟಿ ಫಾಲೋವರ್ಸ್ (ಮೂರನೇ ಸ್ಥಾನ).
➤ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ವರ್ಷವೇ ಅಂದರೆ
2014ರಲ್ಲಿ
ಇನ್ಸ್ಟಾಗ್ರಾಂ ಖಾತೆ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ 12 ವರ್ಷಗಳಲ್ಲಿ ಅವರು 10 ಕೋಟಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯುವ ಸಮುದಾಯದೊಂದಿಗೆ ಸಂವಹನ ನಡೆಸಲು ಅವರು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೇವಲ ಇನ್ಸ್ಟಾಗ್ರಾಂ ಮಾತ್ರವಲ್ಲದೆ,
X (ಹಿಂದಿನ ಟ್ವಿಟ್ಟರ್)
ನಲ್ಲಿ 10.6 ಕೋಟಿ ಹಾಗೂ
ಫೇಸ್ಬುಕ್ನಲ್ಲಿ
5.4 ಕೋಟಿ ಫಾಲೋವರ್ಗಳನ್ನು ಹೊಂದುವ ಮೂಲಕ ಮೋದಿ ಡಿಜಿಟಲ್ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
Take Quiz
Loading...