* 2023-24ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ನ ಭಾಗವಾಗಿ, ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂ ಏಕ್ತಾ ಮಾಲ್ (Unity Mall) ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗಿದೆ.* ಈ ಮಾಲ್ಗಳ ಉದ್ದೇಶ ಒಂದು ಜಿಲ್ಲೆ, ಒಂದು ಉತ್ಪನ್ನ (ODOP), ಭೌಗೋಳಿಕ ಸೂಚನೆ (GI) ಯುಕ್ತ ಉತ್ಪನ್ನಗಳು ಮತ್ತು ಇತರ ಸ್ಥಳೀಯ ಕರಕುಶಲ ವಸ್ತುಗಳ ಪ್ರಚಾರ ಮತ್ತು ಮಾರಾಟವಾಗಿದೆ.* ಹೆಚ್ಚಿನ ಬಂಡವಾಳ ಸಹಾಯಕ್ಕಾಗಿ SASCI ಯೋಜನೆಡಿಯಲ್ಲಿ, ರೂ. 5000 ಕೋಟಿ ಹಂಚಿಕೆ ಮಾಡಲಾಗಿದ್ದು, ಇದನ್ನು ವೆಚ್ಚ ಇಲಾಖೆ ನಿರ್ವಹಿಸುತ್ತಿದೆ. 27 ರಾಜ್ಯಗಳು ತಮ್ಮ ವಿಸ್ತೃತ ಯೋಜನಾ ವರದಿಗಳನ್ನು (DPR) ಸಲ್ಲಿಸಿ ಅನುಮೋದನೆ ಪಡೆದುಕೊಂಡಿವೆ.* ಪ್ರತಿ ರಾಜ್ಯದ ರಾಜಧಾನಿ ಅಥವಾ ಪ್ರಮುಖ ಪ್ರವಾಸೋದ್ಯಮ ಕೇಂದ್ರದಲ್ಲಿ ಈ ಮಾಲ್ ಸ್ಥಾಪನೆ ನಡೆಯುತ್ತಿದೆ. ಉದಾಹರಣೆಗೆ, ಕರ್ನಾಟಕದ ಏಕ್ತಾ ಮಾಲ್ ಮೈಸೂರುನಲ್ಲಿ ನಿರ್ಮಾಣವಾಗುತ್ತಿದೆ ಮತ್ತು ಇದಕ್ಕಾಗಿ ರೂ. 192.99 ಕೋಟಿ ಮಂಜೂರಾಗಿದೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಗಳಿಗೆ ಮೂರು ಮಾಲ್ಗಳ ನಿರ್ವಹಣೆಗೆ ಅನುಮತಿಸಲಾಗಿದೆ.* ಈ ಯೋಜನೆಯಡಿ ಭೂಮಿ ಉಚಿತವಾಗಿ ಅಥವಾ ರಾಜ್ಯದ ವೆಚ್ಚದಲ್ಲಿ ಒದಗಿಸಬೇಕು. ಯೋಜನೆ ನಡಾವಣೆಯು ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ನಡೆಯುತ್ತಿದೆ. * ಈ ಮಾಹಿತಿಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.