* ಇ-ಕಾಮರ್ಸ್ ದೈತ್ಯ ಪ್ಲಿಪ್ಕಾರ್ಟ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕೇತರ ಹಣಕಾಸು ಕಂಪನಿಯಾಗಿ (ಎನ್ಬಿಎಫ್ಸಿ) ಕಾರ್ಯನಿರ್ವಹಿಸಲು ಪರವಾನಗಿ ನೀಡಿದೆ. ವಾಲ್ಮಾರ್ಟ್ ಕಂಪನಿಯು ಇದರಲ್ಲಿ ಶೇಕಡಾ 80 ಪಾಲು ಹೊಂದಿದೆ.* ಈ ಪರವಾನಗಿಯ ಮೂಲಕ, ಪ್ಲಿಪ್ಕಾರ್ಟ್ ನೇರವಾಗಿ ಗ್ರಾಹಕರು ಹಾಗೂ ಮಾರಾಟಗಾರರಿಗೆ ತನ್ನ ವೇದಿಕೆಯ ಮೂಲಕ ಸಾಲ ನೀಡಬಹುದಾಗಿದೆ. ಆದರೆ, ಠೇವಣಿ ಸ್ವೀಕರಿಸಲು ಪ್ಲಿಪ್ಕಾರ್ಟ್ಗೆ ಅವಕಾಶವಿಲ್ಲ.* ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಗೆ ಇದೇ ಮೊದಲ ಬಾರಿಗೆ ಆರ್ಬಿಐ ಎನ್ಬಿಎಫ್ಸಿ ಪರವಾನಗಿ ನೀಡಿದೆ. ಇತರ ಕಂಪನಿಗಳು ಬ್ಯಾಂಕ್ಗಳ ಜೊತೆಗೆ ಒಪ್ಪಂದದ ಮೂಲಕ ಸಾಲ ನೀಡುತ್ತಿದ್ದರೆ, ಪ್ಲಿಪ್ಕಾರ್ಟ್ ನೇರವಾಗಿ ಸಾಲ ಕೊಡುವುದಕ್ಕೆ ಅವಕಾಶ ಪಡೆದಿದೆ.* ಪ್ಲಿಪ್ಕಾರ್ಟ್ 2022ರಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದ್ದು, ಈ ವರ್ಷ ಜೂನ್ 13ರಂದು ಆರ್ಬಿಐದಿಂದ ಅನುಮೋದನೆ ಲಭಿಸಿದೆ.* ಪ್ಲಿಪ್ಕಾರ್ಟ್ 'ಸೂಪರ್.ಮನಿ' ಎಂಬ ಆ್ಯಪ್ ಮೂಲಕ ಗ್ರಾಹಕರಿಗೆ ವೈಯಕ್ತಿಕ ಸಾಲ ನೀಡಲು ಯೋಜಿಸಿದೆ. ಈ ಸೇವೆ ಕೆಲವೇ ತಿಂಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.* ಪ್ರಸ್ತುತ ಅದು ಎಕ್ಸಿಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಕ್ರೆಡಿಟ್ ಸೈಸನ್ ಮೂಲಕ ಸಾಲ ನೀಡುತ್ತಿದೆ.