* ಕೇಂದ್ರ ಸರಕಾರವು 23 ಬಿಲಿಯನ್ ಡಾಲರ್ ಮೌಲ್ಯದ ಪ್ರೊಡಕ್ಷನ್ ಲಿಂಕ್ಸ್ ಇನಿಶಿಯೇಟಿವ್ (PLI) ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.* ವಿದೇಶಿ ಹೂಡಿಕೆ ಸೆಳೆಯಲು 2019ರಲ್ಲಿ ಪ್ರಾರಂಭಿಸಿದ ಈ ಯೋಜನೆಯು ಚೀನಾದಿಂದ ಹೂಡಿಕೆಯನ್ನು ಹಿಂತೆಗೆದ ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸುವುದಾಗಿ ನಿರೀಕ್ಷಿಸಲಾಗಿತ್ತು.* ಫಾಕ್ಸ್ಕಾನ್, ರಿಲಯನ್ಸ್ ಸೇರಿದಂತೆ 750ಕ್ಕೂ ಹೆಚ್ಚು ಕಂಪನಿಗಳು ಇದರಲ್ಲಿ ಭಾಗವಹಿಸಿದ್ದರೂ, ನಿರೀಕ್ಷಿತ ಗುರಿಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ.* 2024ರ ಅಕ್ಟೋಬರ್ ವೇಳೆಗೆ ಯೋಜನೆಯಡಿಯಲ್ಲಿ 151.93 ಶತಕೋಟಿ ಮೌಲ್ಯದ ಸರಕುಗಳು ಉತ್ಪಾದನೆಯಾದರೂ, ಗುರಿಯ ಶೇ.37 ಮಾತ್ರ ಈಡೇರಿಸಿತು, ಇದರ ಪರಿಣಾಮವಾಗಿ ಸರಕಾರ ಕೇವಲ 1.73 ಶತಕೋಟಿ ಪ್ರೋತ್ಸಾಹ ಧನ ನೀಡಿತು.* ಔಷಧ ಮತ್ತು ಮೊಬೈಲ್ ಉತ್ಪಾದನೆಯಲ್ಲಿ ಯಶಸ್ಸು ಕಂಡರೂ, ಉಕ್ಕು, ಜವಳಿ, ಸೌರಫಲಕ ತಯಾರಿಕೆಯಂತಹ ವಲಯಗಳು ಚೀನಾದ ಸ್ಪರ್ಧೆಯಿಂದ ಹಿನ್ನಡೆ ಅನುಭವಿಸಿದವು.* ಪಿಎಲ್ಐ ಸ್ಥಗಿತವು ಭಾರತದ ಉತ್ಪಾದನಾ ವಲಯದ ಭವಿಷ್ಯ ಕುರಿತು ಕಳವಳ ಹುಟ್ಟುಹಾಕಿದ್ದು, ಜಾಗತಿಕ ವ್ಯಾಪಾರ ಉದ್ವಿಗ್ನತೆ ನಡುವೆಯೂ ಸರಿಯಾದ ಯೋಜನೆ ಅನುಷ್ಠಾನಕ್ಕೆ ವಿಫಲವಾಗಿದೆ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.