* ಸಚಿವ ಸಂಪುಟ 'ಪ್ಲಾಟ್ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆ'ಗೆ ಅನುಮೋದನೆ ನೀಡಿ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಶುಕ್ರವಾರ(ಏಪ್ರಿಲ್11) ತಿಳಿಸಿದರು..* ಗಿಗ್ ಕಾರ್ಮಿಕರಿಗೆ ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ವಸತಿ, ಮಕ್ಕಳಿಗೆ ಶಿಕ್ಷಣ, ಕೌಶಲಾಭಿವೃದ್ಧಿ, ಅಂತ್ಯಸಂಸ್ಕಾರ ಧನಸಹಾಯ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಲಿವೆ.* ಪ್ರತಿವಹಿವಾಟಿನ ಮೇಲೆ ಶೇ 1–2ರೊಳಗಿನ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುವುದು.* ಆಹಾರ ಡೆಲಿವರಿ, ರೈಡ್ ಶೇರಿಂಗ್, ಇ-ಕಾಮರ್ಸ್ ಕ್ಷೇತ್ರಗಳ ಗಿಗ್ ಕಾರ್ಮಿಕರಿಗೆ ಈ ಸೌಲಭ್ಯಗಳು ಅನ್ವಯವಾಗಲಿವೆ.* ಪ್ಲಾಟ್ಫಾರ್ಮ್ ಸೇವೆಯ ವೇಳೆ ಸಂಭವನೀಯ ಅಪಘಾತಗಳಿಗೆ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆ.* ಕರ್ನಾಟಕದಲ್ಲಿ ಸದ್ಯ 2.3 ಲಕ್ಷ ಗಿಗ್ ಕಾರ್ಮಿಕರಿದ್ದಾರೆ. ಕಲ್ಯಾಣಕ್ಕಾಗಿ 'ಕರ್ನಾಟಕ ಪ್ಲಾಟ್ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿ' ಸ್ಥಾಪನೆ.* 'ಗಿಗ್ ವಿಮಾ ಯೋಜನೆ' ಅಡಿಯಲ್ಲಿ ₹4 ಲಕ್ಷ ಅಪಘಾತ ಪರಿಹಾರ ಮತ್ತು ₹2 ಲಕ್ಷ ಜೀವ ವಿಮೆ, ಯೋಜನೆಗೆ ₹1 ಕೋಟಿ ಅನುದಾನ.