* ಸಮುದ್ರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆಗೆ ಸಂಬಂಧಿಸಿದಂತೆ ಹೊಸ ಕಾನೂನುಬದ್ದ ಜಾಗತಿಕ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ದಕ್ಷಿಣ ಕೊರಿಯಾದ ಬುಸಾನ್ನಲ್ಲಿ 170ಕ್ಕೂ ಹೆಚ್ಚು ದೇಶಗಳು ಡಿ.2 ರಂದು ಸಮಾಗಮಗೊಳ್ಳಲಿವೆ.* 2022ರಿಂದ ನಡೆಯುತ್ತಿರುವ ಐದನೇ ಮತ್ತು ಕೊನೆಯ ಸುತ್ತಿನ ಮಾತುಕತೆ ಇದಾಗಿದ್ದು, ವಿಶ್ವಸಂಸ್ಥೆಯ ಪರಿಸರ ಸಂಸ್ಥೆ (UNEA) 2024ರ ಅಂತ್ಯದ ವೇಳೆಗೆ ಈ ಒಪ್ಪಂದ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ.* ಪ್ರಪಂಚದಾದ್ಯಂತ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, 2000ರಲ್ಲಿ 234 ಮಿಲಿಯನ್ ಟನ್ನಷ್ಟಿದ್ದ ಪ್ಲಾಸ್ಟಿಕ್ ಉತ್ಪಾದನೆ 2019ರಲ್ಲಿ 460 ಮಿಲಿಯನ್ ಟನ್ಗೆ ಹೆಚ್ಚಾಗಿದೆ.* ಅರ್ಧದಷ್ಟು ಪ್ಲಾಸ್ಟಿಕ್ ಏಷ್ಯಾದಲ್ಲೇ ಉತ್ಪಾದಿಸಲಾಗುತ್ತದೆ. ಉತ್ತರ ಅಮೆರಿಕದಲ್ಲಿ ಶೇ.19ರಷ್ಟು ಯೂರೋಪ್ನಲ್ಲಿ ಶೇ.15ರಷ್ಟು ಉತ್ಪಾದಿಸಲಾಗುತ್ತಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ವರದಿಯ ಪ್ರಕಾರ, ಉತ್ಪಾದನೆ ಪ್ರಮಾಣ 2040ರ ವೇಳೆಗೆ 700 ಮಿಲಿಯನ್ ಟನ್ ತಲುಪುವ ನಿರೀಕ್ಷೆ ಇದೆ.* 2023ರಲ್ಲಿ ಪ್ರಕಟವಾದ 'ದಿ ಲ್ಯಾನ್ಸೆಟ್' ಅಧ್ಯಯನದ ಪ್ರಕಾರ, ಪ್ಲಾಸ್ಟಿಕ್ ಕೊಳೆಯಲು 20ರಿಂದ 500 ವರ್ಷ ಬೇಕು. ಉತ್ಪಾದನೆಯಲ್ಲಿ ಶೇ.10ರಷ್ಟನ್ನು ಮರುಬಳಸಲಾಗುತ್ತದೆ. ವಾರ್ಷಿಕ 400 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. 2024ರಿಂದ 2050ರ ಮಧ್ಯೆ ಇದು ಶೇ.62ರಷ್ಟು ಹೆಚ್ಚುವ ನಿರೀಕ್ಷೆ ಇದೆ.* ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯ ಪರಿಸರದಲ್ಲಿ ಸೇರ್ಪಡೆಯಾಗುತ್ತಿದ್ದು, ನದಿ-ಸಾಗರಗಳಲ್ಲಿ ಸೋರಿಕೆಯಾಗುತ್ತಿದೆ. ಅಲ್ಲಿ ಸಣ್ಣ ಕಣಗಳಾಗಿ (ಮೈಕ್ರೋ ಪ್ಲಾಸ್ಟಿಕ್ ಅಥವಾ ನ್ಯಾನೊಪ್ಲಾಸ್ಟಿಕ್) ಬದಲಾಗುತ್ತದೆ.