* ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ (MLRS)ಗಾಗಿ ಕ್ರಮವಾಗಿ ಏರಿಯಾ ಡಿನಿಯಲ್ ಮ್ಯೂನಿಷನ್ (ADM) ಟೈಪ್-1 (DPICM) ಮತ್ತು ಹೈ ಎಕ್ಸ್ಪ್ಲೋಸಿವ್ ಪ್ರಿ ಫ್ರಾಗ್ಮೆಂಟೆಡ್ (HEPF) Mk-1 ರಾಕೆಟ್ಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು Bharat Electronics Limited (BEL), ಎಕನಾಮಿಕ್ ಎಕ್ಸ್ಪ್ಲೋಸಿವ್ ಲಿಮಿಟೆಡ್ (EEL) ಮತ್ತು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (MIL) ಎಂಬ ಮೂರು ಪ್ರಮುಖ ದೇಶಿಯ ಸಂಸ್ಥೆಗಳೊಂದಿಗೆ ಒಟ್ಟು ₹10,147 ಕೋಟಿ ವೆಚ್ಚದಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದೆ.* ಅತ್ಯಾಧುನಿಕ ರಾಕೆಟ್ ಲಾಂಚರ್ ವ್ಯವಸ್ಥೆಯಾಗಿರುವ “ಪಿನಾಕಾ’ಗೆ ಅತ್ಯಾಧುನಿಕ ರಾಕೆಟ್ಗಳನ್ನು ಖರೀದಿಸುವುದು ಈ ಒಪ್ಪಂದಗಳ ಉದ್ದೇಶವಾಗಿದೆ.* ಎಡಿಎಂ ಟೈಪ್-1 (ಡಿಪಿಐಸಿಎಂ) ಮತ್ತು ಎಚ್ಇಪಿಎಫ್ ಎಂಕೆ-1 (ಇ) ರಾಕೆಟ್ಗಳ ಖರೀದಿಯು ಆರ್ಟಿಲರಿ ರಾಕೆಟ್ ರೆಜಿಮೆಂಟ್ಗಳ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.* ಈ ಮುಂದುವರಿದ ಎಡಿಎಂ (ಡಿಪಿಐಸಿಎಂ) ಮತ್ತು ಎಚ್ಇಪಿಎಫ್ ಮದ್ದುಗುಂಡುಗಳು ನಿಖರ ಮತ್ತು ದೀರ್ಘ-ಶ್ರೇಣಿಯ ದಾಳಿಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತೀಯ ಸೇನೆಯ ಫೈರ್ಪವರ್ ಅನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.