* ಫ್ರಾನ್ಸ್ ಜೊತೆಗಿನ AI ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಭಾಗವಹಿಸಲಿದ್ದಾರೆ. ಫೆಬ್ರವರಿ 11ಕ್ಕೆ ಮಹತ್ವದ ಸಭೆ ಪ್ಯಾರಿಸ್ನಲ್ಲಿ ನಡೆಯಲಿದೆ.* ಅಮೆರಿಕದ ಉಪಾಧ್ಯಕ್ಷರು, ಚೀನಾದ ಉಪ ಪ್ರಧಾನಿ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯ ನಂತರ ಪಿಎಂ ಮೋದಿ ಅವರು ಫ್ರಾನ್ಸ್ ಮೂಲದ ಪ್ರಮುಖ ಕಂಪನಿಗಳ ಮುಖ್ಯಸ್ಥರ ಜೊತೆಯಲ್ಲಿ ಮಾತುಕತೆ ನಡೆಸಲಿದ್ದಾರೆ.* ಇದೇ ಸಭೆಯಲ್ಲಿ ಏರೋಸ್ಪೇಸ್ ಸೇರಿ ಎಂಜಿನ್, ಜಲಾಂತರ್ಗಾಮಿ ನೌಕೆ ಅಭಿವೃದ್ಧಿ ಕ್ಷೇತ್ರಗಳ ಬಗ್ಗೆ ಭಾರತ ಮತ್ತು ಫ್ರಾನ್ಸ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.* ಆಧುನಿಕ ಜಗತ್ತು AI ತಂತ್ರಜ್ಞಾನದ ಜೊತೆಗೆ ವೇಗವಾಗಿ ಸಾಗುತ್ತಿದ್ದು, ಭಾರತ ಕೂಡ ಈ ವೇಗಕ್ಕೆ ಹೊಂದಿಕೊಳ್ಳಲು ಮುಂದಾಗಿದೆ.* ಪ್ರಧಾನಿ ಮೋದಿ ಫೆಬ್ರವರಿ 12 ರಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಸಭೆಯನ್ನು ನಡೆಸಲಿದ್ದಾರೆ. ಇದೇ ಸಭೆಯಲ್ಲಿ ಏರೋಸ್ಪೇಸ್ ಸೇರಿ ಎಂಜಿನ್, ಜಲಾಂತರ್ಗಾಮಿ ನೌಕೆ ಅಭಿವೃದ್ಧಿ ಕ್ಷೇತ್ರಗಳ ಬಗ್ಗೆ ಭಾರತ ಮತ್ತು ಫ್ರಾನ್ಸ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.* ದಕ್ಷಿಣ ಫ್ರಾನ್ಸ್ ನಗರ ಮಾರ್ಸಿಲ್ಲೆಯಲ್ಲಿ ಭಾರತ ಹೊಸ ಕಾನ್ಸುಲೇಟ್ ತೆರೆಯಲಿದ್ದು, ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರ ಮಾತುಕತೆ ಕೂಡ ಇಲ್ಲೇ ನಡೆಯಲಿದೆ.