* ಫೋರ್ಬ್ಸ್ 400 ಅಮೆರಿಕ ಬಿಲಿಯನೇರ್ಗಳ ಪಟ್ಟಿಯಲ್ಲಿ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ 342 ಶತಕೋಟಿ ಡಾಲರ್ಗಳ ಸಂಪತ್ತಿನಿಂದ ಅಗ್ರಸ್ಥಾನ ಪಡೆದಿದ್ದಾರೆ. ಅವರು ಸತತ ನಾಲ್ಕನೇ ವರ್ಷವೂ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.* ಈ ಪಟ್ಟಿಯಲ್ಲಿ ಮಾರ್ಕ್ ಜುಕರ್ಬರ್ಗ್ 2ನೇ ಹಾಗೂ ಜೆಫ್ ಬೆಜೊಸ್ 3ನೇ ಸ್ಥಾನ ಗಳಿಸಿದ್ದಾರೆ. ಭಾರತೀಯ ಮೂಲದ ಆರು ಗಣ್ಯರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.* ಅರ್ಚಿ ಅಲ್ಲಿನ್ ಎಮ್ಮರ್ಸನ್ ಸೇರಿ 90 ವರ್ಷ ಮೇಲ್ಪಟ್ಟ 23 ಮಂದಿ ಹಾಗೂ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ 33 ಮಂದಿ ಬಿಲಿಯನೇರ್ಗಳಿದ್ದಾರೆ. 42 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹತ್ತು ಶ್ರೀಮಂತರು ಹಾಗೂ ಈ ಬಾರಿಯೂ ನಾಲ್ವರು ಯುವಕರು ಹೊಸದಾಗಿ ಸೇರಿದ್ದಾರೆ.* ಮಹಿಳಾ ಶ್ರೀಮಂತರಲ್ಲಿ ಆಲಿನ್ ವಾಲ್ಟನ್ (ವಾಲ್ಮಾರ್ಟ್ ಸಂಸ್ಥಾಪಕರ ಉತ್ತರಾಧಿಕಾರಿ) ಅಗ್ರಸ್ಥಾನ ಪಡೆದಿದ್ದಾರೆ.ಭಾರತೀಯ ಮೂಲದ ಅಮೆರಿಕನ್ ಶ್ರೀಮಂತರು ರ್ಯಾಂಕ್ ಹೆಸರು ಉದ್ಯಮ ಸಂಪತ್ತು ($ ಶತಕೋಟಿ)126 ವಿನೋದ್ ಖೋಸ್ಲಾ ಖೋಸ್ಲಾ ವೆಂಚರ್ಸ್ 9.9246 ಬೈಜು ಭಟ್ ರಾಬಿನ್ ಹುಡ್ ಅಪ್ಲಿಕೇಶನ್ 6255 ರಾಕೇಶ್ ಗಂಗ್ವಾಲ್ ವಾಯುಯಾನ ಸಂಸ್ಥೆ 5.9261 ಜಯಶ್ರೀ ಉಳ್ಳಾಲ ಅರಿಷ್ಟಾ ಸಿಇಒ 5.8352 ಸಂಜಿತ್ ಬಿಸ್ವಾಸ್ ಸೆನ್ಸಾರ್ ಸಿಸ್ಟಮ್ಸ್ 4.2352 ರಾಜೀವ್ ಜೈನ್ ಜಿಕ್ಯೂಜಿ ಪಾರ್ಟನರ್ಸ್ 4.2