* ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯನ್ನು 'ಹಣಕಾಸು ಕ್ರಿಯಾ ಕಾರ್ಯಪಡೆ' (ಎಫ್ಎಟಿಎಫ್) ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಖಂಡಿಸಿದೆ.* ‘‘ಆರ್ಥಿಕ ಬೆಂಬಲವಿಲ್ಲದೆ ಉಗ್ರ ಸಂಘಟನೆಗಳು ಇಂತಹ ಹಿಂಸಾಚಾರ ಎಸಗಲು ಸಾಧ್ಯವಿಲ್ಲ’’ ಎಂದು ಎಫ್ಎಟಿಎಫ್ ಸ್ಪಷ್ಟಪಡಿಸಿದೆ.* ಈ ಹೇಳಿಕೆ ಭಾರತವು ಪಾಕಿಸ್ತಾನವನ್ನು ಪುನಃ ‘ಬೂದು ಪಟ್ಟಿಗೆ’ ಸೇರಿಸಬೇಕೆಂಬ ಆಗ್ರಹಕ್ಕೆ ಬಲ ನೀಡಿದೆ.* 2018ರಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡಿದ ಆರೋಪದ ಮೇರೆಗೆ ಪಾಕಿಸ್ತಾನ ಬದು ಪಟ್ಟಿಗೆ ಸೇರಿಸಲಾಗಿತ್ತು; ಆದರೆ 2022ರಲ್ಲಿ ಅದನ್ನು ಪಟ್ಟಿಯಿಂದ ಹೊರತಗೆಯಲಾಯಿತು.* ಎಫ್ಎಟಿಎಫ್ ಭಯೋತ್ಪಾದನೆಗೆ ಹಣಕಾಸು ಪೂರೈಕೆ ಹಾಗೂ ಹಣದ ದುರ್ಬಳಕೆಯನ್ನು ತಡೆಗಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿದೆ.