* ಪ್ರಧಾನಿ ಮೋದಿ ಯುವಜನರಲ್ಲಿ ದೇಶಾದ್ಯಂತ ಇತ್ತೀಚೆಗೆ ಹೆಚ್ಚುತ್ತಿರುವ ಸ್ಥೂಲಕಾಯ ಸಮಸ್ಯೆ ಪರಿಹಾರಕ್ಕೆ ವಿನೂತನ ಅಭಿಯಾನ ಆರಂಭಿಸಿದ್ದಾರೆ.* 'ಫಿಟ್ ಇಂಡಿಯಾ' ಅಭಿಯಾನವನ್ನು ಮತ್ತೊಂದು ಹೆಜ್ಜೆ ಮುಂದೆ ಕೊಂಡೊಯ್ದಿದ್ದಾರೆ.* ಪ್ರಧಾನಿ ಮೋದಿ ಸ್ಥೂಲಕಾಯ ಸಮಸ್ಯೆ ಕುರಿತು ಜಾಗೃತಿ ಮೂಡಿಸಲು ದೇಶದ ವಿವಿಧ ಕ್ಷೇತ್ರಗಳ 10 ಖ್ಯಾತನಾಮರನ್ನು ನಾಮನಿರ್ದೇಶನ ಮಾಡಿದ್ದಾರೆ.* ಮೋದಿ ಅವರ ಮಹಾ ಅಭಿಯಾನದಲ್ಲಿ, ಒಬ್ಬರು ಹತ್ತು ಮಂದಿಯನ್ನು ನಾಮ ನಿರ್ದೇಶನ ಮಾಡುತ್ತಾ ಸರಪಳಿ ಸೃಷ್ಟಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಹಲವರು ಸ್ಪಂದಿಸಿ, ಈಗಾಗಲೇ ಹತ್ತು ಮಂದಿಯನ್ನು ಆಯ್ಕೆ ಮಾಡಿದ್ದಾರೆ.* ಮೋದಿ ಹೆಸರಿಸಿದವರು: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಉದ್ಯಮಿ ಆನಂದ್ ಮಹೀಂದ್ರ, ಅಂತಾರಾಷ್ಟ್ರೀಯ ಶೂಟರ್ ಮನು ಭಾಕರ್, ವೇಯ್ಡ್ ಲಿಪ್ಪರ್ ಮೀರಾಬಾಯಿ ಚಾನು, ನಟರಾದ ಮೋಹನ್ ಲಾಲ್, ಆರ್. ಮಾಧವನ್, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಗಾಯಕಿ ಶ್ರೇಯಾ ಘೋಷಾಲ್, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹಾಗೂ ಲೋಕಸಭಾ ಸಂಸದ ನಿರಾಹುವಾ ಅವರನ್ನು ಮೋದಿ ನಾಮ ನಿರ್ದೇಶನ ಮಾಡಿದ್ದಾರೆ.ಆತಂಕಕಾರಿ ಅಂಕಿ-ಅಂಶಗಳು- ಭಾರತದಲ್ಲಿ ಶೇ.24ರಷ್ಟು ಮಹಿಳೆಯರು, ಶೇ.23ರಷ್ಟು ಪುರುಷರು ಸ್ಥೂಲಕಾಯಿಗಳು- ಪ್ರಸ್ತುತ ಭಾರತದಲ್ಲಿ 1.25 ಕೋಟಿಗೂ ಅಧಿಕ ಮಕ್ಕಳಿಗೆ ಸ್ಥೂಲಕಾಯ - ಸ್ಥೂಲಕಾಯ ಹೆಚ್ಚಿರುವ ದೇಶಗಳಲ್ಲಿ ಭಾರತಕ್ಕೆ 3ನೇ ಸ್ಥಾನ (ಅಮೆರಿಕ, ಚೀನಾ ಬಳಿಕ)- 2035ರ ವೇಳೆಗೆ ವಿಶ್ವದಲ್ಲಿ 3.3 ಶತಕೋಟಿ ಮಂದಿಗೆ ಬೊಜ್ಜು ಸಮಸ್ಯೆ ಸಂಭವ- 2035ರ ವೇಳೆಗೆ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮಂದಿ ಆರೋಗ್ಯವಂತ ತೂಕದ ಪರಿಧಿ ಮೀರಲಿದ್ದಾರೆ.* ಆರೋಗ್ಯವಂತ ಜನಸಂಖ್ಯೆ ವಿಕಸಿತ ಭಾರತದ ಪ್ರಮುಖ ಅಂಗ. ಅಡುಗೆ ಎಣ್ಣೆ ಬಳಕೆಯಲ್ಲಿ ಶೇ.10ರಷ್ಟು ಕಡಿತಗೊಳಿಸುವುದು ಆರೋಗ್ಯ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಲಾಭದಾಯಕ, ಜಾಗತಿಕ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುತ್ತದೆ.