* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಗಡ್ಕರಿ ಅವರು ನವದೆಹಲಿಯ ಸಿಎಸ್ಐಆರ್ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿಯಲ್ಲಿ ಫಿನೋಮ್ ಇಂಡಿಯಾ ನ್ಯಾಷನಲ್ ಬಯೋಬ್ಯಾಂಕ್ ಉದ್ಘಾಟಿಸಿದರು.* ಈ ಬಯೋಬ್ಯಾಂಕ್ನಲ್ಲಿ 10,000 ವ್ಯಕ್ತಿಗಳ ಜೀನೋಮಿಕ್ ಹಾಗೂ ಕ್ಲಿನಿಕಲ್ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಈ ಡೇಟಾ ಮೂಲಕ ಮಧುಮೇಹ, ಕ್ಯಾನ್ಸರ್, ಹೃದಯ ರೋಗ, ಅಪರೂಪದ ಅನುವಂಶಿಕ ಕಾಯಿಲೆಗಳ ಕುರಿತು ಅಧ್ಯಯನ ಮಾಡಲಾಗುತ್ತದೆ.* ಭಾರತದ ಜನಾಂಗಗಳಲ್ಲಿ ಯಾವುದೇ ರೋಗ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿಗೆ ಸಹ ಈ ಯೋಜನೆ ನೆರವಾಗಲಿದೆ. ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಸಹಿತ ದತ್ತಾಂಶ ಸಂಗ್ರಹಿಸಲು ಎಐ ಮತ್ತು ಕ್ವಾಂಟಮ್ ತಂತ್ರಜ್ಞಾನ ಬಳಸಲಾಗುತ್ತಿದೆ.* ಈ ಯೋಜನೆಯು ಸರ್ಕಾರ, ಸಂಶೋಧನಾ ಸಂಸ್ಥೆಗಳು ಹಾಗೂ ಖಾಸಗಿ ಉದ್ಯಮಗಳ ನಡುವೆ ಪಾಲುದಾರಿಕೆಯನ್ನು ನಿರ್ಮಿಸುತ್ತಿದ್ದು, ದೀರ್ಘಕಾಲಿಕ ಆರೋಗ್ಯ ಸಂಶೋಧನೆಗೆ ಮಹತ್ವಪೂರ್ಣವಾಗಲಿದೆ.* ಜೀನೋಮಿಕ್ಸ್ ಸಂಶೋಧನೆಯಲ್ಲಿ ಭಾರತದಲ್ಲಿ ಸಿಎಸ್ಐಆರ್ ಮತ್ತು ಐಜಿಐಬಿ ಪ್ರಮುಖ ಪಾತ್ರವಹಿಸುತ್ತಿವೆ.* ಐಜಿಐಬಿ, ಭಾರತದಲ್ಲಿ ಮಾನವ ಜಿನೋಮ್ ಡಿಕೋಡ್ ಮಾಡಿದ ಮೊದಲ ಸಂಸ್ಥೆಯಾಗಿದ್ದು, ಮಹಿಳಾ ಆರೋಗ್ಯ ಸಂಬಂಧಿತ ರೋಗಗಳ ಪತ್ತೆ ಹಾಗೂ ಔಷಧ ಅಭಿವೃದ್ಧಿಯಲ್ಲಿ ಮುಂದಿರುವುದು ಗಮನಾರ್ಹವಾಗಿದೆ.