* ಭಾರತವು ಫಿಲಿಪ್ಪಿನ್ಸ್ಗೆ 200 ಮಿಲಿಯನ್ ಡಾಲರ್ ಮೌಲ್ಯದ ಆಕಾಶ್ ಕ್ಷಿಪಣಿ ವ್ಯವಸ್ಥೆ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂತಿಮಗೊಳ್ಳಲಿದೆ.* ಈ ಒಪ್ಪಂದವು ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.* ಆಕಾಶ್ ಕ್ಷಿಪಣಿ, ಅದರ ಮುಂದುವರಿದ ತಂತ್ರಜ್ಞಾನ, ಕಡಿಮೆ ವೆಚ್ಚ ಹಾಗೂ ಕಾರ್ಯಾಚರಣಾ ದಕ್ಷತೆಯಿಂದಾಗಿ ಅಂತಾರಾಷ್ಟ್ರೀಯ ಗಮನಸೆಳೆದಿದೆ.* ಆಕಾಶ್ ಕ್ಷಿಪಣಿ ವ್ಯವಸ್ಥೆ ಮಧ್ಯಮ-ಶ್ರೇಣಿಯ ವಿಮಾನ, ಕ್ರೂಸ್ ಕ್ಷಿಪಣಿ ಹಾಗೂ ಗಾಳಿಯಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಗುರಿಯಾಗಿಸುತ್ತದೆ. ಇದು 25 ಕಿ.ಮೀ ವ್ಯಾಪ್ತಿ ಹಾಗೂ 60 ಕೆ.ಜಿ ಸ್ಫೋಟಕ ತಲೆಯನ್ನು ಹೊಂದಿದೆ.* ಭಾರತ ಮತ್ತು ಫಿಲಿಪೀನ್ಸ್ ನಡುವಿನ ಹೊಸ ಒಪ್ಪಂದವು 2024ರಲ್ಲಿ ಅರ್ಮೇನಿಯಾದೊಂದಿಗೆ ನಡೆದ 230 ಮಿಲಿಯನ್ ಡಾಲರ್ ರಕ್ಷಣಾ ರಫ್ತು ಒಪ್ಪಂದವನ್ನು ಮೀರಿಸುವ ನಿರೀಕ್ಷೆಯಿದೆ.* ದಕ್ಷಿಣ ಚೀನಾ ಸಮುದ್ರದಲ್ಲಿನ ವಿವಾದದ ಮಧ್ಯೆ, ಫಿಲಿಪೀನ್ಸ್ ಭಾರತೀಯ ಆಕಾಶ್ ಕ್ಷಿಪಣಿ ವ್ಯವಸ್ಥೆಯಲ್ಲಿ ಆಸಕ್ತಿ ಪ್ರದರ್ಶಿಸಿದೆ. ಈ ಒಪ್ಪಂದವು ಭಾರತದ ರಕ್ಷಣಾ ರಫ್ತು ಹೆಚ್ಚಿಸುವುದರ ಜೊತೆಗೆ ಚೀನಾದ ಪ್ರಭಾವವನ್ನು ತಡೆಹಿಡಿಯಲು ಸಹಾಯ ಮಾಡಲಿದೆ.* ಭಾರತ ಮತ್ತು ಫಿಲಿಪ್ಪಿನ್ಸ್ ಆಕಾಶ್ ಕ್ಷಿಪಣಿ ಒಪ್ಪಂದದತ್ತ ಮುಂದಾಗಿದ್ದು, ಬ್ರಹ್ಮಸ್ ಕ್ಷಿಪಣಿ ರಪ್ಪಿನ ಬಳಿಕ ರಕ್ಷಣಾ ಸಂಬಂಧ ಬಲವರ್ಧನೆಗೊಳ್ಳಲಿದೆ. ಬ್ರೆಜಿಲ್, ಈಜಿಪ್ಟ್ ಸೇರಿ ಇತರ ರಾಷ್ಟ್ರಗಳೂ ಭಾರತೀಯ ಕ್ಷಿಪಣಿಗಳ ಖರೀದಿಗೆ ಆಸಕ್ತಿ ತೋರಿದ್ದು, ಇದು ಭಾರತದ ಆರ್ಥಿಕತೆ ಮತ್ತು ಜಾಗತಿಕ ಪಾಲುದಾರಿಕೆಗೆ ಉತ್ತೇಜನ ನೀಡಲಿದೆ.