* ಆನೆಯ ಬಳಿಕ ಜಗತ್ತಿನಲ್ಲಿರುವ ಅತಿ ದೊಡ್ಡ ಸಸ್ತನಿ ಫೇಂಡಾಮೃಗ, ಇವುಗಳಲ್ಲಿ ಐದು ವಿಧಗಳಿವೆ ಅವುಗಳಲ್ಲಿ 'ಒಂಟಿ ಕೊಂಬಿನ ಫೇಂಡಾಮೃಗ' ಅಥವಾ 'ಇಂಡಿಯನ್ ರೈನೊ' ಕೂಡ ಒಂದು. ಬೇಟೆಯ ಕಾರಣಕ್ಕೆ ಅಳಿವಿನ ಅಂಚಿಗೆ ಬಂದಿದ್ದ ಫೇಂಡಾಮೃಗವನ್ನು ಭಾರತ ಉಳಿಸಿಕೊಂಡಿದೆ. ಇದರ ಸಂರಕ್ಷಣೆ ಪ್ರಕ್ರಿಯೆಗೆ ಶತಮಾನದ ಇತಿಹಾಸವಿದೆ. ಜಗತ್ತಿನಲ್ಲಿ ಪ್ರಾಣಿ ಸಂರಕ್ಷಣೆಯ 'ಭಾರತ ಮಾದರಿ' ರೂಪುಗೊಂಡಿದೆ.* ಪ್ರತಿ ವರ್ಷ ಸೆಪ್ಟೆಂಬರ್ 22 ವಿಶ್ವ ಫೇಂಡಾಮೃಗ ದಿನವನ್ನು ಆಚರಿಸಲಾಗುತ್ತದೆ. ಹುಲಿ, ಆನೆ, ಸಿಂಹಗಳಂತೆ ಫೇಂಡಾಮೃಗ ಬಹು ಚರ್ಚಿತ ಪ್ರಾಣಿಯೇನಲ್ಲ. * ವಿಶ್ವ ಫೇಂಡಾಮೃಗ ದಿನದ ಇದರ ಭಾಗವಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಪುಟ್ಟ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಒಂಟಿ ಕೊಂಬಿನ ಫೇಂಡಾಮೃಗ ಸಂರಕ್ಷಣೆಯಲ್ಲಿ ಭಾರತವು ಕೈಗೊಂಡ ಕ್ರಮಗಳ ಕುರಿತು ಅದರಲ್ಲಿ ಮಾಹಿತಿಗಳಿವೆ. 1960ರ ಹೊತ್ತಿಗೆ 600ರಷ್ಟಿದ್ದ ಒಂಟಿ ಕೊಂಬಿನ ಫೇಂಡಾಮೃಗಗಳ ಸಂಖ್ಯೆಯು 2024ರ ಹೊತ್ತಿಗೆ 4,000 ದಾಟಿವೆ.* ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಪ್ರದೇಶವು ಒಂಟಿ ಕೊಂಬಿನ ಫೇಂಡಾಮೃಗಗಳ ಆವಾಸಸ್ಥಾನ. ಅಸ್ಸಾಂ ಮಾತ್ರವಲ್ಲದೆ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಈ ಫೇಂಡಾಮೃಗದ ಆವಾಸವಿದೆ. ಭಾರತ ಮಾತ್ರವಲ್ಲದೆ ನೇಪಾಳ ಹಾಗೂ ಭೂತಾನ್‌ನಲ್ಲಿಯೂ ಒಂಟಿ ಕೊಂಬಿನ ಫೇಂಡಾಮೃಗಗಳು ಕಾಣಸಿಗುತ್ತವೆ. ಈ ದೇಶಗಳಲ್ಲಿ ಬಿಟ್ಟು ಬೇರೆಯಲ್ಲೂ ಈ ಪ್ರಬೇಧದ ಫೇಂಡಾಮೃಗಗಳಿಲ್ಲ.* 1897ರ ಅಸ್ಸಾಂ ಅರಣ್ಯ ಸಂರಕ್ಷಣೆ ಕಾಯ್ದೆ, 1932ರ ಬಂಗಾಳ ಫೇಂಡಾಮೃಗ ಸಂರಕ್ಷಣೆ ಕಾಯ್ದೆ, 1954ರ ಅಸ್ಸಾಂ ಫೇಂಡಾಮೃಗ ಸಂರಕ್ಷಣೆ ಕಾಯ್ದೆ, 1972ರ ವನ್ಯಜೀವಿ (ಸಂರಕ್ಷಣೆ) ಕಾಯ್ದೆ ಹಾಗೂ ಈ ಕಾಯ್ದೆಗೆ 2009ರಲ್ಲಿ ಅಸ್ಸಾಂ ಸರ್ಕಾರ ಮಾಡಿದ ತಿದ್ದುಪಡಿ... ಇಂಥ ಹಲವು ಕಠಿಣ ಕಾನೂನುಗಳ ಕಾರಣದಿಂದಾಗಿ ಭಾರತದಲ್ಲಿ ಒಂಟಿ ಕೊಂಬಿನ ಫೇಂಡಾಮೃಗಗಳ ಸಂಖ್ಯೆ ಏರಿಕೆಯಾಗುತ್ತಿದೆ ಮತ್ತು ಇವುಗಳ ಬೇಟೆ ನಿಂತುಹೋಗಿದೆ.* ಫೇಂಡಾಮೃಗಗಳ ಸಂಖ್ಯೆ ಏರಿಕೆ ಯಶಸ್ಸಿನ ಇತರೆ ಪ್ರಮುಖ ಕಾರಣಗಳು : - ಆವಾಸಸ್ಥಾನಗಳ ವ್ಯಾಪ್ತಿಯನ್ನು ಹೆಚ್ಚಿಸಿರುವುದು- ನೂತನ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಿರುವುದು- ಬೇಟೆಗೆ ಸಂಪೂರ್ಣ ನಿಷೇಧ- ಬೇಟೆಯಾಡಿದರೆ ಹೆಚ್ಚಿನ ಪ್ರಮಾಣ ದಂಡ ವಸೂಲಿ, ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಸಜೆ* ವಿಶ್ವದ ಒಟ್ಟು ಒಂಟಿ ಕೊಂಬಿನ ಫೇಂಡಾಮೃಗಗಳಲ್ಲಿ ಶೇ 70ರಷ್ಟು ಭಾರತದಲ್ಲಿವೆ. ಭಾರತದಲ್ಲಿರುವ ಒಟ್ಟು ಒಂಟಿ ಕೊಂಬಿನ ಫೇಂಡಾಮೃಗಳ ಸಂಖ್ಯೆಯಲ್ಲಿ ಶೇ 80ರಷ್ಟು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿವೆ.* 20ನೇ ಶತಮಾನದ ಆರಂಭದಲ್ಲಿ ಜಗತ್ತಿನಾದ್ಯಂತ 5 ಲಕ್ಷ ಫೇಂಡಾಮೃಗಗಳ ಸಂಖ್ಯೆ ಇತ್ತು ಪ್ರಸ್ತುತ ಜಗತ್ತಿನಲ್ಲಿ ಒಟ್ಟು 28,000 ಫೇಂಡಾಮೃಗಗಳ ಸಂಖ್ಯೆ ಇದೆ.