* ಸರಕುಗಳಲ್ಲಿ ಭಾರತ-ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದದ ಪರಿಶೀಲನಾ ಸಭೆಯ ಮುಂದಿನ ಸುತ್ತಿನ ಮಾತುಕತೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.* ಇದೇ ತಿಂಗಳಿನಲ್ಲಿ ನಾಲ್ಕನೇ ಸುತ್ತಿನ ಸಮಾಲೋಚನೆಯು ಮುಕ್ತಾಯಗೊಂಡಿದೆ.* ಈ ಒಪ್ಪಂದವು ಸುಸ್ಥಿರ ಮಾದರಿಯಲ್ಲಿ ಆರ್ಥಿಕ ವಹಿವಾಟಿಗೆ ಪೂರಕವಾಗಿ ಸರಕುಗಳ ವಹಿವಾಟು ನಡೆಸಲು ನೆರವಾಗಲಿದೆ ಎಂದು ಹೇಳಿದೆ.* AITIGA (Asean India Trade in Goods Agreement) ಯ ಪರಿಶೀಲನೆಯು ASEAN ಪ್ರದೇಶದೊಂದಿಗೆ ಸುಸ್ಥಿರ ರೀತಿಯಲ್ಲಿ ವ್ಯಾಪಾರವನ್ನು ಹೆಚ್ಚಿಸುವಲ್ಲಿ ಒಂದು ಹೆಜ್ಜೆ ಮುಂದಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.* ಸರಕುಗಳಿಗೆ ಸಂಬಂಧಿಸಿದ ಆಸಿಯಾನ್ ಇಂಡಿಯಾ ವ್ಯಾಪಾರದ ಜಂಟಿ ಸಮಿತಿಯಡಿ ಎಂಟು ಉಪ ಸಮಿತಿಗಳನ್ನು ರಚಿಸಲಾಗಿದೆ. ಮಾರುಕಟ್ಟೆಯ ಲಭ್ಯತೆ, ನಿಯಮಾವಳಿ, ತಾಂತ್ರಿಕ ನಿಯಮ, ಕಸ್ಟಮ್, ಆರ್ಥಿಕ ಮತ್ತು ತಾಂತ್ರಿಕ ಸಹಕಾರ, ಕಾನೂನು ಹಾಗೂ ಸಾಂಸ್ಥಿಕ ನಿಬಂಧನೆಗಳ ಬಗ್ಗೆ ಈ ಸಮಿತಿಗಳು ಚರ್ಚಿಸಲಿವೆ.* ಭಾರತದ ಜಾಗತಿಕ ವ್ಯಾಪಾರದಲ್ಲಿ ಸುಮಾರು 11 ಪ್ರತಿಶತ ಪಾಲನ್ನು ಹೊಂದಿರುವ ಆಸಿಯಾನ್ ಒಂದು ಗುಂಪಿನಂತೆ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ.* ಆಸಿಯಾನ್ ಸದಸ್ಯರಲ್ಲಿ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿವೆ.