* ಪ್ರತಿ ವರ್ಷ ಫೆಬ್ರವರಿ 13ರಂದು ರೇಡಿಯೊ ಮಹತ್ವದ ಬಗ್ಗೆ ಜನ ಜಾಗೃತಿ ಮೂಡಿಸಲು ಮತ್ತು ರೇಡಿಯೊ ಮೂಲಕ ಮಾಹಿತಿ- ಪ್ರಸಾರವನ್ನು ಉತ್ತೇಜಿಸಲು ವಿಶ್ವ ರೇಡಿಯೋ ದಿನ ಆಚರಿಸಲಾಗುತ್ತದೆ.* ವಿಶ್ವ ರೇಡಿಯೋ ದಿನದ 2025 ರ ಥೀಮ್ "ರೇಡಿಯೋ ಮತ್ತು ಹವಾಮಾನ ಬದಲಾವಣೆ" ಆಗಿದೆ.* ಈ ದಿನವನ್ನು ಯುನೆಸ್ಕೋ ತನ್ನ 36 ನೇ ಸಮ್ಮೇಳನದಲ್ಲಿ ನವೆಂಬರ್ 3, 2011 ರಂದು ಗೊತ್ತುಪಡಿಸಿತು.* ಫೆಬ್ರವರಿ 13 ರಂದು 1946 ರಲ್ಲಿ ಅಮೆರಿಕದಲ್ಲಿ ಮೊದಲ ರೇಡಿಯೋ ಪ್ರಸರಣ ಸಂದೇಶವನ್ನು ಕಳುಹಿಸಲಾಯಿತು. 2010ರಲ್ಲಿ ಸ್ಪೇನ್ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ಅದೇ ದಿನದಂದು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬಗ್ಗೆ ತನ್ನ ಅಭಿಪ್ರಾಯವನ್ನು ಯುನೆಸ್ಕೋದ ಮುಂದೆ ಪ್ರಸ್ತಾಪಿಸಲಾಯಿತು. * 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರೇಡಿಯೋ ದಿನವು ಆಚರಿಸಲು ಮುಂದಾಯಿತು. ಹಾಗಾಗಿ 2012ರ ಫೆಬ್ರವರಿ 13ರಿಂದ ಪ್ರತಿ ವರ್ಷವು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.* ಭಾರತದಲ್ಲಿ ರೇಡಿಯೋ ಪ್ರಸಾರವು ಆಕಾಶವಾಣಿ ಅಸ್ತಿತ್ವಕ್ಕೆ ಬರುವ ಸರಿಸುಮಾರು 13 ವರ್ಷಗಳ ಮೊದಲೇ ಪ್ರಾರಂಭವಾಯಿತು. ಬಾಂಬೆಯ ರೇಡಿಯೋ ಕ್ಲಬ್ ಜೂನ್ 1923 ರಲ್ಲಿ ಭಾರತದಲ್ಲಿ ಮೊದಲ ರೇಡಿಯೋ ಪ್ರಸಾರವನ್ನು ಮಾಡಿತು. ಸರ್ ಜಗದೀಶ್ ಚಂದ್ರ ಬೋಸ್ (1858-1937) ಭಾರತದ ರೇಡಿಯೋ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ.* ಕಲ್ಕತ್ತಾ (ಈಗ ಕೋಲ್ಕತ್ತಾ) ರೇಡಿಯೋ ಕ್ಲಬ್ ನ್ನು ಸ್ಥಾಪಿಸಲಾಯಿತು. ಭಾರತೀಯ ಪ್ರಸಾರ ಕಂಪನಿ (ಐಬಿಸಿ) ಜುಲೈ 23, 1927 ರಂದು ಅಸ್ತಿತ್ವಕ್ಕೆ ಬಂದಿತು, ಆದರೆ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ನಷ್ಟವನ್ನು ಅನುಭವಿಸಿತು. * ಆಗಸ್ಟ್ 1935 ರಲ್ಲಿ ಲಿಯೋನೆಲ್ ಫೀಲ್ಡೆನ್ ಅವರನ್ನು ಮೊದಲ ಪ್ರಸಾರ ನಿಯಂತ್ರಕರನ್ನಾಗಿ ನೇಮಿಸಲಾಯಿತು. ಆದಾದ ಒಂದೇ ತಿಂಗಳಿಗೆ ಮೈಸೂರಿನಲ್ಲಿ ಖಾಸಗಿ ರೇಡಿಯೋ ಕೇಂದ್ರವಾದ ಆಕಾಶವಾಣಿ ಸ್ಥಾಪನೆಯಾಯಿತು. ಜೂನ್ 8, 1936 ರಂದು ‘ಭಾರತೀಯ ರಾಜ್ಯ ಪ್ರಸಾರ ಸೇವೆ’ ಆಲ್ ಇಂಡಿಯಾ ರೇಡಿಯೋ ಪ್ರಾರಂಭವಾಯಿತು.* ಸಂಸ್ಕೃತದಲ್ಲಿ ಆಕಾಶವಾಣಿ ಎಂದರೆ "ಆಕಾಶದಿಂದ ಧ್ವನಿ" ಎಂದರ್ಥ. ಆಕಾಶವಾಣಿಯ ಘೋಷವಾಕ್ಯವು "ಬಹುಜನ ಹಿತಾಯ : ಬಹುಜನ ಸುಖಾಯ", ಇದು "ಎಲ್ಲರ ಸಂತೋಷ ಮತ್ತು ಕಲ್ಯಾಣಕ್ಕಾಗಿ" ಎಂದು ಅನುವಾದಿಸುತ್ತದೆ.