* ಫೆಬ್ರವರಿ 10 ರಿಂದ 14ರ ವರೆಗೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ 15ನೇ ಆವೃತ್ತಿಯ 'ಏರೋ ಇಂಡಿಯಾ-2025' ವೈಮಾನಿಕ ಪ್ರದರ್ಶನ ನಡೆಯಲಿದೆ.* 'ಶತಕೋಟಿ ಅವಕಾಶಗಳ ಪಥ' (ದಿ ರನ್ವೇ ಟು ಎ ಬಿಲಿಯನ್ ಆಪ್ಪೋರ್ಚುನಿಟಿಸ್) ಎಂಬ ವಿಶಾಲ ಧೈಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. * ಮೊದಲ ಮೂರೂ ದಿನಗಳು ವ್ಯವಹಾರದ ದಿನಗಳಾಗಿರುತ್ತವೆ. ಫೆ.13 ಮತ್ತು14ರಂದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ.* ಈ ಕಾರ್ಯಕ್ರಮ ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ.* ಮಿತ್ರರಾಷ್ಟ್ರಗಳೊಂದಿಗೆ ರಕ್ಷಣಾ ಸಹಭಾಗಿತ್ವದ ಮಾತುಕತೆಯನ್ನು ಸುಲಭಗೊಳಿಸಲು ರಕ್ಷಣಾ ಸಚಿವರ ಸಮಾವೇಶವೂ ನಡೆಯಲಿದೆ.* ಮಂಥನ್ ಕಾರ್ಯಕ್ರಮ ಭಾರತೀಯ ಪ್ರಚಾರವೇ ಸ್ಟಾರ್ಟ್-ಅಪ್ ಹಮ್ಮಿಕೊಳ್ಳಲಾಗಿದೆ. ನವೋದ್ಯಮಗಳ ಏರೊ ಇಂಡಿಯಾ- 2025ರ ಮುಖ್ಯ ಉದ್ದೇಶವಾಗಿದೆ. * ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ದೇಶೀಯ ಸಾರ್ವಜನಿಕ ವಲಯದ ಉದ್ದಿಮೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭಾರತದ ಖಾಸಗಿ ರಕ್ಷಣಾ ಮತ್ತು ವೈಮಾನಿಕ ತಯಾರಿಕಾ ಕಂಪನಿಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.