* ಫ್ರಾನ್ಸ್ ಫೆಬ್ರುವರಿಯಲ್ಲಿ ಆಯೋಜಿಸುತ್ತಿರುವ ಪ್ಯಾರಿಸ್ AI ಶೃಂಗದಲ್ಲಿ ಭಾರತವು ಸಹಾಧ್ಯಕ್ಷತೆ ವಹಿಸಲಿದೆ ಎಂದು ಸಚಿವೆ ಕಾರ್ಲಾ ಚಪಾಜ್ ಬುಧವಾರ(ಜನವರಿ 15) ತಿಳಿಸಿದ್ದಾರೆ.* ಫ್ರಾನ್ಸ್ನ ಪ್ಯಾರೀಸ್ ಗ್ಯಾಂಡ್ ಪ್ಯಾಲೇಸ್ನಲ್ಲಿ ಫೆಬ್ರವರಿ 10 ಮತ್ತು 11ರಂದು ನಡೆಯುವ ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.* ಎಐ ಕುರಿತ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಅಮೆರಿಕಾ, ಚೀನಾ, ಭಾರತ ಸೇರಿ ಹಲವಾರು ದೇಶಗಳ ಜಾಗತಿಕ ನಾಯಕರು, ಕಂಪನಿಗಳ ಸಿಇಒಗಳು, ಕಲಾವಿದರು, ಶಿಕ್ಷಣ ತಜ್ಞರು, ಎನ್ಜಿಒಗಳು, ತಂತ್ರಜ್ಞರು ಮತ್ತು ಸರಕಾರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.* ಈ ಶೃಂಗಸಭೆ ಎಐ ಕುರಿತು ವಿಶ್ವವ್ಯಾಪಿ ಸಂವಾದವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.* ಶೃಂಗಸಭೆಯಲ್ಲಿ ಎಐ ಉದ್ಯೋಗ ಮಾರುಕಟ್ಟೆ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಎಐ ಬೀರಲಿರುವ ಪರಿಣಾಮ, ತಂತ್ರಜ್ಞಾನ ದುರುಪಯೋಗ ಸವಾಲುಗಳಿಗೆ ಪರಿಹಾರ, ಎಐ ಕುರಿತು ಸಾರ್ವಜನಿಕ ಹಿತಾಸಕ್ತಿ, ನಾವೀನ್ಯತೆ ಮತ್ತು ಸಂಸ್ಕೃತಿ, ಜಾಗತಿಕವಾಗಿ ಎಐ ಆಡಳಿತ ಕುರಿತಾಗಿ ಚರ್ಚಿಸಲಾಗುತ್ತದೆ.* ಶೃಂಗಸಭೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ, ಭಾರತ ಸೇರಿದಂತೆ 90 ದೇಶಗಳನ್ನು ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ಫ್ರೆಂಚ್ ಪ್ರೆಸಿಡೆನ್ಸಿ ಘೋಷಿಸಿದೆ.prad* AI ನಲ್ಲಿ ಸಾರ್ವಜನಿಕ ಆಸಕ್ತಿ, ಕೆಲಸದ ಭವಿಷ್ಯ, ನಾವೀನ್ಯತೆ ಮತ್ತು ಸಂಸ್ಕೃತಿ, AI ನಲ್ಲಿ ನಂಬಿಕೆ ಮತ್ತು ಜಾಗತಿಕ AI ಆಡಳಿತಗಳಾದ ಈ ಐದು ಪ್ರಮುಖ ವಿಷಯಗಳ ಮೇಲೆ ಈವೆಂಟ್ ಕೇಂದ್ರೀಕರಿಸುತ್ತದೆ.