* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು 2024ರ (ಗುರುವಾರ) ಹೊಸ ಸಂಸತ್ನಲ್ಲಿ ಮಧ್ಯಂತರ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಅವರ ಬಜೆಟ್ ಭಾಷಣ ಶುರುವಾಗಲಿದೆ. ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಭಾಷಣ ಮುಂದುವರಿಯಬಹುದು.* ಹಣಕಾಸು ಸಚಿವರಾಗಿ ಸೀತಾರಾಮನ್‌ ಅವರು ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಅಲ್ಲದೇ ಪ್ರಧಾನಿ ಮೋದಿ ಅವರು ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್‌ ಕೂಡ ಆಗಲಿದೆ.* ಈ ಏಪ್ರಿಲ್‌ನಲ್ಲಿ ಪ್ರಾರಂಭವಾಗುವ 2024-25 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7 ರ ಸಮೀಪಕ್ಕೆ ಬರುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯವು ಪರಿಶೀಲನಾ ವರದಿಯಲ್ಲಿ ತಿಳಿಸಿದೆ.* ಭಾರತದ ಆರ್ಥಿಕತೆಯು 2022-23ರಲ್ಲಿ ಶೇ.7.2 ಮತ್ತು 2021-22ರಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತದ ಆರ್ಥಿಕತೆಯು ಶೇ.7.3 ಬೆಳವಣಿಗೆ ನಿರೀಕ್ಷಿಸಲಾಗಿದೆ. * 2023-24 ನೇ ಸಾಲಿನ ಬಜೆಟ್ ಗಾತ್ರ ಒಟ್ಟು 4,503,097 ಕೋಟಿ ರೂ. ಆಗಿತ್ತು. ರಕ್ಷಣಾ ಸಚಿವಾಲಯಕ್ಕೆ ಕೇಂದ್ರ ಬಜೆಟ್‌ನಲ್ಲಿ ಶೇ.13.18 ಮೊತ್ತವನ್ನು ಒದಗಿಸಲಾಗಿತ್ತು. * ಈ ಬಾರಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು 9,000 ರೂ. ಏರಿಸಬಹುದು.* ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಆರಂಭಕ್ಕೆ ಅಥವಾ ಅಂತ್ಯಕ್ಕೆ ಸಾರ್ವತ್ರಿಕ ಚುನಾವಣೆ ಬಂದರೆ ಆಗ ಮಂಡಿಸುವ ಬಜೆಟ್ ಪೂರ್ಣಕಾಲಿಕ ಆಗಿರುವುದಿಲ್ಲ. ಕೆಲವೇ ತಿಂಗಳ ಅವಧಿಯ ಖರ್ಚುವೆಚ್ಚ ಗಳನ್ನು ನಿರ್ವಹಿಸುವ ಮುಂಗಡಪತ್ರ ಆಗಿರುತ್ತದೆ. ಪೂರ್ಣಾವಧಿಯ ಸರ್ಕಾರ ತನ್ನ ಕೊನೆಯ ಬಜೆಟ್ ಅನ್ನು ಮಧ್ಯಂತರ ಬಜೆಟ್ ಎಂದು ಕರೆಯುತ್ತದೆ.* ಹೆಚ್ಚು ಬಾರಿ ಮಂಡನೆ ಮಾಡಿದವರು- ಮೊರಾರ್ಜಿ ದೇಸಾಯಿ-10, ಪಿ.ಚಿದಂಬರಂ-9, ಪ್ರಣವ್ ಮುಖರ್ಜಿ- 9. ಯಶವಂತ್ ರಾವ್ ಚವ್ಹಾಣ್-7, ಸಿಡಿ ದೇಶಮುಖ್-7, ಯಶವಂತ್ ಸಿನ್ಹ್ -7. ಟಿ.ವಿ. ಕೃಷ್ಣಮೂರ್ತಿ - 6, ಡಾ. ಮನಮೋಹನ್ ಸಿಂಗ್ - 6.* ಬಜೆಟ್ ರೂಪಿಸಿದ ನವರತ್ನಗಳು- ನಿರ್ಮಲಾ ಸೀತಾರಾಮನ್, ಟಿ.ವಿ.ಸೋಮನಾಥನ್, ಅಜಯ್ ಸೇರ್. ತುಹಿನ್ ಕಾಂತ್ ಪಾಂಡೆಯ್, ಸಂಜಯ್ ಮಲ್ಲೋತ್ರಾ, ವಿವೇಕ್ ಜೋಶಿ, ನಿತೀನ್ ಗುಪ್ತಾ, ಸಂಜಯ್ ಕುಮಾರ್ ಅಗ್ರವಾಲ್, ವಿ.ಅನಂತ್ ನಾಗೇಶ್ವರನ್.