* 2025ರ ಫಾರ್ಚೂನ್ ಜಾಗತಿಕ 500 ಕಂಪನಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅಗ್ರ ಸ್ಥಾನದಲ್ಲಿರುವ ಕಂಪನಿಯಾಗಿ ಉಳಿದಿದೆ.* ಈ ವರ್ಷ ಕಂಪನಿಯು 88ನೇ ಸ್ಥಾನ ಪಡೆದಿದ್ದು, 2024ರ 86ನೇ ಸ್ಥಾನಕ್ಕೆ ಹೋಲಿಸಿದರೆ ಎರಡು ಸ್ಥಾನ ಇಳಿಕೆಯಾಗಿದೆ. ಆದರೆ 2021ರ 155ನೇ ಸ್ಥಾನದಿಂದ ಇದು ನಾಲ್ಕು ವರ್ಷದಲ್ಲಿ 67 ಸ್ಥಾನ ಜಿಗಿದಿದೆ.* ಫಾರ್ಚೂನ್ ಪಟ್ಟಿಯಲ್ಲಿ ಅಮೆರಿಕದ ವಾಲ್ಮಾರ್ಟ್ ಮೊದಲ ಸ್ಥಾನದಲ್ಲಿದೆ. ಅಮೆಜಾನ್ ಎರಡನೇ ಸ್ಥಾನದಲ್ಲಿದ್ದು, ಮೊದಲ ಹತ್ತು ಸ್ಥಾನಗಳಲ್ಲಿ ಚೀನಾದ ಮೂರು ಕಂಪನಿಗಳು ಮತ್ತು ಸೌದಿ ಅರಾಮ್ಕೊ (4ನೇ), ಆ್ಯಪಲ್ (8ನೇ) ಸ್ಥಾನಗಳಲ್ಲಿವೆ.* ಈ ಪಟ್ಟಿಯಲ್ಲಿ ಭಾರತದಿಂದ ಒಟ್ಟು 9 ಕಂಪನಿಗಳು ಸ್ಥಾನ ಪಡೆದಿದ್ದು, ಐದು ಸರ್ಕಾರಿ ಮತ್ತು ನಾಲ್ಕು ಖಾಸಗಿ ವಲಯದ ಕಂಪನಿಗಳಾಗಿವೆ. ಭಾರತೀಯ ಜೀವ ವಿಮಾ ನಿಗಮ (95), ಇಂಡಿಯನ್ ಆಯಿಲ್ (127), ಎಸ್ಬಿಐ (163), ಒಎನ್ಜಿಸಿ (181), ಎಚ್ಡಿಎಫ್ಸಿ ಬ್ಯಾಂಕ್ (258), ಟಾಟಾ ಮೋಟರ್ಸ್ (283), ಭಾರತ್ ಪೆಟ್ರೋಲಿಯಂ (285) ಮತ್ತು ಐಸಿಐಸಿಐ ಬ್ಯಾಂಕ್ (464) ಪಟ್ಟಿಯಲ್ಲಿ ಸೇರಿವೆ.* 2024ರ ಮಾರ್ಚ್ನಲ್ಲಿ 1 ಡಾಲರ್ ₹83.35 ಇದ್ದು, 2025ರ ಮಾರ್ಚ್ ವೇಳೆಗೆ ₹85.45 ಆಗಿತ್ತು. ರೂಪಾಯಿ ಮೌಲ್ಯದ ಈ ಇಳಿಕೆಯು ರಿಲಯನ್ಸ್ ವರಮಾನ ಮತ್ತು ಹೀಗಾಗಿ ಅದರ ಸ್ಥಾನಮಾನದ ಮೇಲೆ ಪ್ರಭಾವ ಬೀರಿದೆ.