Job Description: ಪೆಟ್ರೋಲ್‌ನಲ್ಲಿ 20% ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಗುರಿ ತಲುಪಲು ನೀತಿ ಆಯೋಗದಡಿ ಸಮಿತಿ ರಚನೆ ಮಾಡಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. 2026ರ ಗುರಿ ಶೇ.20 ಆಗಿದ್ದು, ಈಗಾಗಲೇ ಶೇ.19.6 ಸಾಧನೆ ಆಗಿದೆ. ಈ ಗುರಿ ಮುಂದಿನ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸರ್ಕಾರ ಜೈವಿಕ ಇಂಧನ ಮಿಶ್ರಣ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ತೈಲ ಆಮದು ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಉತ್ಪಾದನೆಗೆ ಒತ್ತು ನೀಡುತ್ತಿದೆ. ಪ್ರಸ್ತುತ ಭಾರತದಲ್ಲಿ 1,700 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 1,500 ಕೋಟಿ ಲೀಟರ್ ಪೆಟ್ರೋಲ್‌ಗೆ ಮಿಶ್ರಣಗೊಂಡಿದೆ. ಹಸಿರು ಹೈಡ್ರೋಜನ್ ಬೆಲೆ ಪ್ರಸ್ತುತ ₹390/ಕೆ.ಜಿ. ಇದ್ದು, ಇದು ಅರ್ಧಕ್ಕಿಳಿದರೆ ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯ. ನವೀಕರಿಸಬಹುದಾದ ಇಂಧನಕ್ಕೆ ವಿಶ್ವದಾದ್ಯಂತ ಒತ್ತುವರಿ ಹೆಚ್ಚಾಗಿದ್ದು, ಆರ್ಥಿಕ ಅಭಿವೃದ್ಧಿಗೆ ಇದರಿಂದ ಹಿತ ಎನ್ನಲಾಗಿದೆ.