Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ದಕ್ಷಿಣ ಪಿನಾಕಿನಿ ನದಿ ನೀರು ವಿವಾದ: ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Authored by:
Akshata Halli
Date:
4 ಫೆಬ್ರುವರಿ 2026
➤
ನವದೆಹಲಿ:
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಮತ್ತೊಂದು ಜಲವಿವಾದಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ದಕ್ಷಿಣ ಪಿನಾಕಿನಿ (South Pennaiyar) ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ತಕ್ಷಣವೇ
'ಜಲವಿವಾದ ನ್ಯಾಯಮಂಡಳಿ' (Tribunal)
ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಈ ತೀರ್ಪು ಕರ್ನಾಟಕದ ಪಾಲಿಗೆ ತುಸು ಹಿನ್ನಡೆಯಾಗಿ ಕಂಡರೂ, ದಶಕಗಳ ವಿವಾದಕ್ಕೆ ಕಾನೂನಾತ್ಮಕ ಅಂತ್ಯ ಹಾಡುವ ನಿರೀಕ್ಷೆ ಮೂಡಿಸಿದೆ.
➤
ಸುಪ್ರೀಂ ಕೋರ್ಟ್ ತೀರ್ಪಿನ ಮುಖ್ಯಾಂಶಗಳು:
=>
ನ್ಯಾಯಮಂಡಳಿ ರಚನೆ:
1956ರ ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆಯಡಿ ನ್ಯಾಯಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಕಾನೂನು ಅಡಚಣೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್ ಹಾಗೂ ಎನ್.ವಿ.ಅಂಚಾರಿಯಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
=>
ಕಾಲಮಿತಿ:
ಒಂದು ತಿಂಗಳ ಒಳಗಾಗಿ ಈ ನ್ಯಾಯಮಂಡಳಿಯನ್ನು ರಚಿಸಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.
=>
ಕರ್ನಾಟಕದ ವಾದಕ್ಕೆ ತಡೆ:
ಮಾತುಕತೆ ಅಥವಾ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಕಾಲಾವಕಾಶ ನೀಡಬೇಕೆಂಬ ಕರ್ನಾಟಕದ ಮನವಿಯನ್ನು ಕೋರ್ಟ್ ಪುರಸ್ಕರಿಸಿಲ್ಲ.
➤
ದಕ್ಷಿಣ ಪಿನಾಕಿನಿ ನದಿ ವಿವಾದ:
ದಕ್ಷಿಣ ಪಿನಾಕಿನಿ ನದಿಯು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಹುಟ್ಟಿ, ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಪ್ರಮುಖವಾಗಿ ಕರ್ನಾಟಕವು ಈ ನದಿಯ ಉಪನದಿಯಾದ
ಮಾರ್ಕಂಡೇಯ ನದಿಗೆ
ಅಡ್ಡಲಾಗಿ ಕೋಲಾರ ಜಿಲ್ಲೆಯ ಯರಗೋಳ್ ಬಳಿ ಅಣೆಕಟ್ಟು ನಿರ್ಮಿಸುತ್ತಿರುವುದು ಮತ್ತು ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಂತಹ ಯೋಜನೆಗಳ ಮೂಲಕ ನೀರು ತಿರುಗಿಸುತ್ತಿರುವುದರ ಸುತ್ತ ಸತ್ತ ಸುತ್ತುತ್ತಿದೆ. ಕರ್ನಾಟಕವು ತನ್ನ ಪಾಲಿನ
11.77 ಟಿಎಂಸಿ
ನೀರಿನಲ್ಲಿ 9.77 ಟಿಎಂಸಿ ಬಳಸಲು ಯೋಜಿಸಿದ್ದರೆ, ಈ ಯೋಜನೆಗಳಿಂದಾಗಿ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗ ಒಂದು ತಿಂಗಳೊಳಗೆ ವಿಶೇಷ ನ್ಯಾಯಮಂಡಳಿ (Tribunal) ಸ್ಥಾಪಿಸುವಂತೆ ಕೇಂದ್ರಕ್ಕೆ ಸೂಚಿಸಿದೆ
➤
ಕಾನೂನು ಸಮರ ಮತ್ತು ಸಂಧಾನದ ಹಾದಿ:
-
2018:
ತಮಿಳುನಾಡು ಸರ್ಕಾರವು ಕರ್ನಾಟಕದ ಯೋಜನೆಗಳ ವಿರುದ್ಧ ಮೊದಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
-
2019:
ಜಲವಿವಾದ ನ್ಯಾಯಮಂಡಳಿ ಸ್ಥಾಪಿಸುವಂತೆ ತಮಿಳುನಾಡು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿತು.
-
ಸಂಧಾನ ವಿಫಲ:
ಕೇಂದ್ರ ಜಲಶಕ್ತಿ ಸಚಿವಾಲಯವು 2020 ರಿಂದ 2024ರ ವರೆಗೆ ಹಲವಾರು ಬಾರಿ 'ಸಂಧಾನ ಸಮಿತಿ' (Negotiation Committee) ಮೂಲಕ ಎರಡೂ ರಾಜ್ಯಗಳ ನಡುವೆ ಒಮ್ಮತ ಮೂಡಿಸಲು ಪ್ರಯತ್ನಿಸಿತು. ಒಟ್ಟು 9 ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಫಲಿತಾಂಶ ಬರಲಿಲ್ಲ.
-
ಕರ್ನಾಟಕದ ನಿಲುವು:
ನ್ಯಾಯಮಂಡಳಿ ರಚನೆಗಿಂತ ಸೌಹಾರ್ದಯುತ ಮಾತುಕತೆಯೇ ಲೇಸು ಎಂಬುದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವಾಗಿತ್ತು.
Take Quiz
Loading...