* ಇರಾನ್ ಅಧ್ಯಕ್ಷೀಯ ಚುನಾವಣೆಯ ಅಂತಿಮ ಸುತ್ತಿನಲ್ಲಿ ಹೃದಯ ಶಸ್ತ್ರಚಿಕಿತ್ಸಕ ಮತ್ತು ಶಾಸಕರಾಗಿರುವ ಮಸೌದ್ ಪೆಜೆಶ್ಕಿಯಾನ್ ಅವರು ಇರಾನ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಇರಾನ್‌ನ ಆಂತರಿಕ ಸಚಿವಾಲಯ ಜುಲೈ 06 (ಶನಿವಾರ) ತಿಳಿಸಿದೆ.* ಸಂಪ್ರದಾಯವಾದಿ ಸಯೀದ್ ಜಲೀಲಿ ಮತ್ತು ಸುಧಾರಣಾವಾದಿ ನಾಯಕ ಮಸೂದ್ ಪೆಜೆಶ್ಚಿಯಾನ್ ಅವರ ನಡುವೆ ನಡೆದ ಚುನಾವಣೆಯಲ್ಲಿ 69 ವರ್ಷದ ಪೆಜೆಶ್ಚಿಯಾನ್ 1.6 ಕೋಟಿಗೂ ಅಧಿಕ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಜಲೀಲಿ ಅವರು ಸುಮಾರು 1.3 ಕೋಟಿ ಮತಗಳನ್ನು ಗಳಿಸಿದ್ದಾರೆ.  * 3 ಕೋಟಿಗೂ ಹೆಚ್ಚು ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದು, ಶೇ.49.8ರಷ್ಟು ಮತದಾನ ನಡೆದಿದೆ. 6 ಲಕ್ಷಕ್ಕೂ ಅಧಿಕ ಮತಗಳು ಅಸಿಂಧುವಾಗಿವೆ ಎಂದು ಚುನಾವಣಾ ಆಯೋಗದ ವಕ್ತಾರ ಮೊಕ್ಸಿನ್ ಇಸ್ಲಾಮಿ ಅವರು ಮಾಹಿತಿ ನೀಡಿದ್ದಾರೆ.* ಮೊಹಮ್ಮದ್ ಖತಾಮಿ ಅವರ ಸರ್ಕಾರದಲ್ಲಿ 2001 ಮತ್ತು 2005ರ ನಡುವೆ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. 2016 ರಿಂದ 2020ರವರೆಗೆ ತಬ್ರಿಜ್, ಓಸ್ಕು ಮತ್ತು ಅಜರ್‌ಶಹ‌ರ್ ಜಿಲ್ಲೆಗಳ ಮೊದಲ ಉಪ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.