* ಬಾಲಿವುಡ್ನ ಹಿರಿಯ ನಟ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನೋಜ್ ಕುಮಾರ್ ಮುಂಬೈನಲ್ಲಿ ವಿಧಿವಶರಾದರು.* 87 ವರ್ಷ ವಯಸ್ಸಿನ ಮನೋಜ್ ಕುಮಾರ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.* ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾದ ಅವರು ಚಿಕಿತ್ಸೆ ಪಡೆದರೂ, ಶುಕ್ರವಾರ( ) ಮುಂಜಾನೆ 3:30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು.* ದೇಶಭಕ್ತಿಯಿಂದ ಕೂಡಿದ ಚಿತ್ರಗಳಿಗೆ ಪ್ರಸಿದ್ಧರಾದ ಅವರು ಅಭಿಮಾನಿಗಳಿಂದ 'ಭರತ್ ಕುಮಾರ್' ಎಂದು ಕರೆಸಿಕೊಳ್ಳುತ್ತಿದ್ದವರು. ಉಪಕಾರ್ (1967), ಪುರಬ್ ಔರ್ ಪಶ್ಚಿಮ್ (1970), ಕ್ರಾಂತಿ (1981) ಚಿತ್ರಗಳಲ್ಲಿ ಗಮನಾರ್ಹ ಪಾತ್ರವಹಿಸಿದ್ದರು.* 1992ರಲ್ಲಿ ಪದ್ಮಶ್ರೀ, 1999ರಲ್ಲಿ ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಇವರಿಗೆ ಲಭಿಸಿತು.