* ಭಾರತದ ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದಿರುವ ಹಾಲಿ ಒಲಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಪುರುಷರ ಜಾವೆಲಿನ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.* ಆಗಸ್ಟ್ 6 ರಂದು ನಡೆದ ಪುರುಷರ ಜಾವಲಿನ್ ಎಸೆತ ಫೈನಲ್ ಅರ್ಹತೆಗೆ ನಿಗದಿಪಪಡಿಸಿದ್ದ 84 ಮೀಟರ್ ಗುರಿಯನ್ನು ಮೀರಿ 89.34 ಮೀಟರ್ ಎಸೆಯುವ ಮೂಲಕ, 5.34 ಮೀಟರ್ ಹೆಚ್ಚುವರಿ ಎಸೆಯುವ ಮೂಲಕ ಫೈನಲ್ಗೆ ಅರ್ಹತೆ ಪಡೆದುಕೊಂಡರು ಆ ಮೂಲಕ ಭಾರತಕ್ಕೆ ಚಿನ್ನದ ಭರವಸೆ ಮೂಡಿಸಿದ್ದಾರೆ.* ಪ್ರಸಕ್ತ ಅವಧಿಯಲ್ಲಿ ಚೋಪ್ರಾ ಅವರ ಅಮೋಘ ಸಾಧನೆಯಾಗಿದೆ. ಮೂರು ವರ್ಷಗಳ ಹಿಂದೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಪ್ಯಾರಿಸ್ ನಲ್ಲೂ ಚಿನ್ನದ ಪದಕ ಗಳಿಸುವ ವಿಶ್ವಾಸದಲ್ಲಿದ್ದಾರೆ. ನೀರಜ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ 87.58 ಮೀಟರ್ ಎಸೆದು ಚಿನ್ನದ ಪದಕ ಗಳಿಸಿದ್ದರು. * ಇದೇ ವಿಭಾಗದಲ್ಲಿ ಭಾರತದವರೇ ಆದ ಕಿಶೋರ್ ಜೇನಾ ಉತ್ತಮ ಸಾಧನೆ ಮಾಡಲು ವಿಫಲರಾಗಿದ್ದಾರೆ.80.73 ಮೀಟರ್ ಜಾವೆಲಿನ್ ಎಸೆದ ಜೇನಾ ಅವರು 18ನೇ ಪಡೆಯುವ ಮೂಲಕ ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. * ಫೈನಲ್ ಪ್ರವೇಶಿಸಿದವರು : - ನೀರಜ್ ಚೋಪ್ರಾ (ಭಾರತ) : 89.34 ಮೀ- ಆ್ಯಂಡರ್ಸನ್ ಪೀಟರ್ಸ್ (ಗ್ರೆನೆಡಾ) : 88.63 ಮೀ- ಜೂಲಿಯನ್ ವೆಬರ್ (ಜರ್ಮನಿ) : 87.76 ಮೀ- ಅರ್ಷದ್ ನದೀಂ (ಪಾಕಿಸ್ತಾನ) : 86.59 ಮೀ- ಜೂಲಿಯಸ್ ಗೋ (ಕೆನ್ಯಾ) : 85.97 ಮೀ- ಲ್ಯೂಜ್ ಮಾರ್ಸೆ ಡಿಸಿಲ್ವಾ (ಬ್ರೆಜಿಲ್) : 85.91 ಮೀ - ಜೇಕಬ್ ವಾಡ್ಲೆಚ್ (ಜೆಕ್ ಗಣರಾಜ್ಯ) : 85.63 ಮೀ- ಟೋನಿ ಕೆರಾನೆನ್ (ಫಿನ್ಸೆಂಡ್) : 85.27 ಮೀ- ಆಯಂಡ್ರಿನ್ ಮಾರ್ಡ್ರೆ (ಮೊಲೊವಾ) : 84.13 ಮೀ- ಒಲಿವರ್ ಹಿಲ್ಯಾಂಡರ್ (ಫಿನ್ಸೆಂಡ್) : 83.81 ಮೀ- ಕೆಶಾರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬಾಗೊ) : 83.02 ಮೀ- ಲೆಸಿ ಎಟ್ಟಾಟಲೊ (ಫಿನ್ನೆಂಡ್) : 82.91 ಮೀ