Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಪಾಕಿಸ್ತಾನದಲ್ಲಿ ಆರ್ಥಿಕ ಹಾಹಾಕಾರ: 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದ ಬಡತನ! 7 ಕೋಟಿ ಜನರಿಗೆ ಸಂಕಷ್ಟ
Authored by:
Akshata Halli
Date:
23 ಫೆಬ್ರುವರಿ 2026
➤
ಇಸ್ಲಾಮಾಬಾದ್:
ನೆರೆಯ ರಾಷ್ಟ್ರ ಪಾಕಿಸ್ತಾನ ಸದ್ಯ ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿದೆ. ಪಾಕಿಸ್ತಾನ ಸರ್ಕಾರದ ಯೋಜನಾ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಕೃತ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಬಡತನದ ಪ್ರಮಾಣವು ಕಳೆದ 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಅಂದರೆ
ಶೇ. 29ಕ್ಕೆ
ತಲುಪಿದೆ.
70 ಮಿಲಿಯನ್ (7 ಕೋಟಿ)
ಜನರು ಕಡು ಬಡತನದಲ್ಲಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರ ಮಾಸಿಕ ಆದಾಯ ಕೇವಲ
8,484 ರೂ.
(ಪಾಕಿಸ್ತಾನಿ ರೂಪಾಯಿ). ನಿರುದ್ಯೋಗ ದರವು 21 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಅಂದರೆ
ಶೇ. 7.1ಕ್ಕೆ
ಏರಿಕೆಯಾಗಿದೆ.
➤
ಪಾಕಿಸ್ತಾನದ ಯೋಜನಾ ಸಚಿವ
ಅಹ್ಸಾನ್ ಇಕ್ಬಾಲ್
ಬಿಡುಗಡೆ ಮಾಡಿದ ವರದಿಯ ಪ್ರಕಾರ, 2019ರಲ್ಲಿ ಶೇ. 21.9ರಷ್ಟಿದ್ದ ಬಡತನದ ಅನುಪಾತವು ಪ್ರಸ್ತುತ ಶೇ. 28.9ಕ್ಕೆ ಏರಿದೆ. ಇದಕ್ಕೆ ಮುಖ್ಯ ಕಾರಣಗಳು:
-
ಅತಿಯಾದ ಹಣದುಬ್ಬರ:
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದು.
-
ಐಎಂಎಫ್ (IMF) ಷರತ್ತುಗಳು:
ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯಲು ಸಬ್ಸಿಡಿಗಳನ್ನು ಕಡಿತಗೊಳಿಸಿರುವುದು ಜನರ ಮೇಲೆ ಹೊರೆಯಾಗಿದೆ.
-
ನೈಸರ್ಗಿಕ ವಿಕೋಪಗಳು:
ಕಳೆದ ವರ್ಷಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಕೃಷಿ ವಲಯವನ್ನು ಧ್ವಂಸಗೊಳಿಸಿದೆ.
-
ಆದಾಯ ಕುಸಿತ:
ಕಳೆದ ಏಳು ವರ್ಷಗಳಲ್ಲಿ ಪಾಕಿಸ್ತಾನದ ಸರಾಸರಿ ಕುಟುಂಬದ ನೈಜ ಆದಾಯವು ಶೇ. 12ರಷ್ಟು ಕುಸಿದಿದೆ.
➤
ಬಡತನವು ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಹರಡಿದೆ. ಪ್ರಮುಖವಾಗಿ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳು ತೀವ್ರ ಸಂಕಷ್ಟದಲ್ಲಿವೆ.
1.ಬಲೂಚಿಸ್ತಾನ : ಶೇ. 42 ರಿಂದಾ ಶೇ. 47 ಕ್ಕೆ
2.ಖೈಬರ್ ಪಖ್ತುನ್ಖ್ವಾ: ಶೇ. 28.7 ರಿಂದಾ ಶೇ. 35.3 ಕ್ಕೆ
3.ಸಿಂಧ್: ಶೇ. 24.5 ರಿಂದಾ ಶೇ. 32.6 ಕ್ಕೆ
4.ಪಂಜಾಬ್:ಶೇ. 16.5 ರಿಂದಾ ಶೇ. 23.3 ಕ್ಕೆ
➤
ವರದಿಯ ಪ್ರಕಾರ, ಗ್ರಾಮೀಣ ಭಾಗದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಬಡತನವು
ಶೇ. 28.2 ರಿಂದ ಶೇ. 36.2 ಕ್ಕೆ
ಏರಿಕೆಯಾಗಿದೆ. ಅದೇ ರೀತಿ ನಗರ ಪ್ರದೇಶಗಳಲ್ಲಿ ಬಡತನವು
ಶೇ. 11 ರಿಂದ ಶೇ. 17.4 ಕ್ಕೆ
ಏರಿದೆ. ಕೃಷಿ ಬಿಕ್ಕಟ್ಟು ಮತ್ತು ಕೈಗಾರಿಕಾ ಚಟುವಟಿಕೆಗಳ ಕುಸಿತವು ಈ ಅಸಮಾನತೆಗೆ ಕಾರಣವಾಗಿದೆ.
Take Quiz
Loading...