* ಭಾರತವು ಪಾಕಿಸ್ತಾನವನ್ನು ಮತ್ತೆ ಎಫ್ಎಟಿಎಫ್ನ ಬೂದುಪಟ್ಟಿಗೆ (ಗ್ರೇಲಿಸ್ಟ್) ಸೇರಿಸುವಂತೆ ಮುಂದಿನ ಸಭೆಯಲ್ಲಿ ಪ್ರಬಲವಾಗಿ ಒತ್ತಾಯಿಸುವ ನಿರೀಕ್ಷೆ ಇದೆ.* ಈ ಕುರಿತು ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.* ಬೂದುಪಟ್ಟಿಗೆ ಸೇರ್ಪಡೆಗೊಂಡ ದೇಶಗಳಿಗೆ ಆರ್ಥಿಕವಾಗಿ ಹಲವು ಸಮಸ್ಯೆಗಳು ಎದುರಾಗುತ್ತವೆ.* ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳ ಮೇಲೆ ಕಟ್ಟುನಿಟ್ಟಾದ ನಿಗಾ ಇರಿಸಲಾಗುತ್ತದೆ. ಇದರಿಂದ ವಿದೇಶಿ ಹೂಡಿಕೆ ಹಾಗೂ ನೆರವಿಗೆ ಪರಿಣಾಮ ಬೀರಬಹುದು.* ಪಾಕಿಸ್ತಾನ 2018ರಲ್ಲಿ ಬೂದುಪಟ್ಟಿಗೆ ಸೇರಿಸಲಾಗಿತ್ತು ಮತ್ತು 2022ರಲ್ಲಿ ಅಿಂದ ಹೊರ ಬಿದ್ದಿತ್ತು. ಪ್ರಸ್ತುತ 25 ದೇಶಗಳು ಬೂದುಪಟ್ಟಿಯಲ್ಲಿವೆ.* ಮೂಲಗಳ ಪ್ರಕಾರ, ಭಾರತವು ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್ ನೀಡಬಹುದಾದ ಮುಂದಿನ ಹಣಕಾಸು ನೆರವಿಗೂ ತೀವ್ರ ವಿರೋಧ ವ್ಯಕ್ತಪಡಿಸಲಿದೆ.