* ಭಾರತವು ವಿಶ್ವಬ್ಯಾಂಕ್ ಪಾಕಿಸ್ತಾನಕ್ಕೆ ನೀಡಲು ಉದ್ದೇಶಿಸಿರುವ ಸಾಲದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ.* ಪಾಕಿಸ್ತಾನ ಈ ಹಣವನ್ನು ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳ ಖರೀದಿಗೆ ದುರ್ಬಳಕೆ ಮಾಡಲಿದೆ ಎಂದು ಭಾರತದ ವಾದವಾಗಿದೆ.* ವರ್ಷದ ಆರಂಭದಲ್ಲಿ ವಿಶ್ವಬ್ಯಾಂಕ್ ಪಾಕಿಸ್ತಾನಕ್ಕೆ ₹1.70 ಲಕ್ಷ ಕೋಟಿ (2 ಸಾವಿರ ಕೋಟಿ ಡಾಲರ್) ಸಾಲ ನೀಡಲು ತೀರ್ಮಾನಿಸಿತ್ತು. ಈ ಹಣವನ್ನು ಹವಾಮಾನ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಬಳಸುವುದಾಗಿ ಪಾಕಿಸ್ತಾನ ತಿಳಿಸಿದೆ.* ಆದರೆ ಮೂಲಗಳ ಪ್ರಕಾರ, ಪಾಕಿಸ್ತಾನ ಈ ಹಿಂದೆಯೂ ಅಂತಾರಾಷ್ಟ್ರೀಯ ನೆರವನ್ನು ರಕ್ಷಣಾ ಉದ್ದೇಶಗಳಿಗೆ ಬಳಸಿದೆ.* ಅಭಿವೃದ್ಧಿಯ ಹೆಸರಿನಲ್ಲಿ ಪಡೆದ ಹಣ ಜನರ ಕಲ್ಯಾಣಕ್ಕೆ ಉಪಯೋಗವಾಗಿಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ.* ಐಎಂಎಫ್ ಪಾಕಿಸ್ತಾನಕ್ಕೆ ನೀಡಲು ಉದ್ದೇಶಿಸಿರುವ ₹19,500 ಕೋಟಿ (230 ಕೋಟಿ ಡಾಲರ್) ಸಾಲಕ್ಕೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.* ಈ ಸಂಬಂಧ ಐಎಂಎಫ್ ಸಭೆಯಿಂದ ಭಾರತ ಹೊರಗುಳಿದಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಚರ್ಚೆ ನಡೆಸಿದ್ದಾರೆ.* ಐಎಂಎಫ್ ಸಾಲವನ್ನು ಸ್ಥಗಿತಗೊಳಿಸದಿದ್ದರೂ, ಭಾರತ ಒತ್ತಡವಿತ್ತ ಕಾರಣ 11 ಷರತ್ತುಗಳನ್ನು ಪೂರೈಸುವಂತೆ ಪಾಕಿಸ್ತಾನಕ್ಕೆ ಸೂಚಿಸಲಾಗಿದೆ.