* ಅಮೆರಿಕವು ಪಾಕಿಸ್ತಾನಕ್ಕೆ ನೀಡುವ ವಿದೇಶಿ ಸಹಾಯವನ್ನು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಕಾರ್ಯನಿರ್ವಾಹಕ ಆದೇಶದ ನಂತರ, ತಾತ್ಕಾಲಿಕವಾಗಿ ಅಮಾನತುಗೊಳಿಸಿ ಮರು ಮೌಲ್ಯಮಾಪನ ಮಾಡುವುದಾಗಿ ಮಾಧ್ಯಮಗಳು ವರದಿ ಮಾಡಿದ್ದಾರೆ.* ಅಮೆರಿಕದ ಈ ನಿರ್ಧಾರದಿಂದ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಪ್ರೋತ್ಸಾಹಿಸುವ ' ಸಾಂಸ್ಕೃತಿಕ ಸಂರಕ್ಷಣೆಗಾಗಿ ರಾಯಭಾರಿಗಳ ನಿಧಿ' ಯೋಜನೆ ಸೇರಿದಂತೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿಯ (USAID)ಹಲವು ಯೋಜನೆಗಳು ಸ್ಥಗಿತಗೊಂಡಿವೆ.* ಟ್ರಂಪ್ ನಿರ್ಧಾರದಿಂದ ಆರ್ಥಿಕ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಐದು ಯೋಜನೆಗಳು ಸ್ಥಗಿತಗೊಂಡಿವೆ. ಇದರೊಂದಿಗೆ, 2025ರ ಅಂತ್ಯದಲ್ಲಿ ಸಾಮಾಜಿಕ ರಕ್ಷಣೆ ಚಟುವಟಿಕೆಗಳು ರದ್ದಾಗಬಹುದು.* ಅಮೆರಿಕದ ಕ್ರಮವು ಆರೋಗ್ಯ, ಕೃಷಿ, ಆಹಾರ ಭದ್ರತೆ, ಪ್ರವಾಹ, ಹವಾಮಾನ ಮತ್ತು ಶಿಕ್ಷಣ ಯೋಜನೆಗಳಿಗೆ ಹೊಡೆತ ನೀಡಿದ್ದು, ಟ್ರಂಪ್ ಅವರ ಆದೇಶದಿಂದ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಆಡಳಿತ ನಿಧಿಗಳಿಗೂ ಪರಿಣಾಮವಿದೆ. ಕೆಲವೊಂದು ಕಾರ್ಯಕ್ರಮಗಳು ಶಾಶ್ವತವಾಗಿ ಸ್ಥಗಿತಗೊಳ್ಳಬಹುದು ಅಥವಾ ಕಡಿಮೆಯಾಗಬಹುದು ಎಂದು ಭಯವನ್ನು ವ್ಯಕ್ತಪಡಿಸಲಾಗುತ್ತಿದೆ.* ಅಮೆರಿಕ ಪಾಕಿಸ್ತಾನಕ್ಕೆ ನೀಡುತ್ತಿರುವ ವಾರ್ಷಿಕ ನೆರವಿನ ಬಗ್ಗೆ ಸ್ಪಷ್ಟತೆ ಇಲ್ಲ, ಹೀಗಾಗಿ ಯೋಜನೆಗಳ ಒಟ್ಟು ಮೌಲ್ಯವೂ ಅನಿಶ್ಚಿತವಾಗಿದೆ. ಪಾಕಿಸ್ತಾನಕ್ಕೆ ನೆರವು ಸ್ಥಗಿತಗೊಳ್ಳಲು ಟ್ರಂಪ್ರ ಕಾರ್ಯನಿರ್ವಾಹಕ ಕ್ರಮಗಳು ಮತ್ತು ಅವುಗಳ ಪರಿಣಾಮ ಕುರಿತು ಪಾಕಿಸ್ತಾನದ ಅಧಿಕಾರಿಗಳು ದೃಢಪಡಿಸಿಲ್ಲ.