* ಪಾಕಿಸ್ತಾನದ ಆರ್ಥಿಕ ಸುಸ್ಥಿರತೆ ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ ಸುಧಾರಣೆಗಾಗಿ 80 ಕೋಟಿ ಅಮೆರಿಕನ್ ಡಾಲರ್ ಮೊತ್ತದ ನೆರವು ಒದಗಿಸುವ ಯೋಜನೆಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಒಪ್ಪಿಗೆ ನೀಡಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.* “ಸಂಪನ್ಮೂಲ ಕ್ರೋಢೀಕರಣ ಸುಧಾರಣಾ ಯೋಜನೆಯಡಿ ಎಡಿಬಿ 80 ಕೋಟಿ ಡಾಲರ್ಗಳ ಒಟ್ಟು ನೆರವನ್ನು ಒದಗಿಸಲಿದೆ. ಇದರಲ್ಲಿ 30 ಕೋಟಿ ಡಾಲರ್ಗಳ ನೀತಿ ಆಧಾರಿತ ಸಾಲ ಮತ್ತು 50 ಕೋಟಿ ಡಾಲರ್ಗಳ ಕಾರ್ಯಕ್ರಮ ಆಧಾರಿತ ಖಾತರಿ ಸೇರಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. * ಇದು ತಾನು ಮೊತ್ತಮೊದಲಿಗೆ ಒದಗಿಸುತ್ತಿರುವ ಇಂತಹ ಖಾತರಿ. ಇದರಿಂದ ಪಾಕಿಸ್ತಾನ ಸರ್ಕಾರವು ವಾಣಿಜ್ಯ ಬ್ಯಾಂಕ್ಗಳಿಂದ 1 ಶತಕೋಟಿ ಡಾಲರ್ ಮೊತ್ತದ ಸಂಪನ್ಮೂಲವನ್ನು ಸಂಗ್ರಹಿಸಲು ಸಾಧ್ಯವಾಗಲಿದೆ’ ಎಂದು ಎಡಿಬಿ ಪ್ರಕಟಣೆಯಲ್ಲಿ ಹೇಳಿದೆ.* ಐಎಂಎಫ್ ಬಳಿಯೂ ಸಾಲಕ್ಕಾಗಿ ಪಾಕಿಸ್ತಾನ ಕೈಚಾಚಿತ್ತು. ಯಾವುದೇ ಕಾರಣಕ್ಕೂ ಹಣ ಮಂಜೂರು ಮಾಡಬಾರದು ಎಂದು ಭಾರತ ಒತ್ತಡವನ್ನು ಹೇರಿತ್ತು. * ಈ ಹಣವನ್ನು ಪಾಕಿಸ್ತಾನ ಮತ್ತೆ ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತದೆ ಎಂದು ಭಾರತ ವಾದಿಸಿತ್ತು. ಆದರೆ ಈ ಮಧ್ಯೆಯೂ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲ ಅಂದರೆ ಸುಮಾರು 19 ಸಾವಿರ ಕೋಟಿ ರೂಪಾಯಿ ಸಾಲ ಮಂಜೂರು ಮಾಡಿತ್ತು.* "ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆಯು ಆರ್ಥಿಕ ಮತ್ತು ಸುಧಾರಣಾ ಗುರಿಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಹೊಸ ಸಾಲದ ಕಂತುಗಳನ್ನು ಬಿಡುಗಡೆ ಮಾಡುವ ಮೊದಲು, ಪಾಕಿಸ್ತಾನ 11 ಹೊಸ ಷರತ್ತುಗಳ ಪಾಲನೆಯ ಭರವಸೆ ನೀಡಬೇಕು" ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಒತ್ತಾಯಿಸಿದೆ.