* ಪಹಲ್ಗಾಮ್ ಉಗ್ರರ ದಾಳಿ ಘಟನೆ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಇದರ ನಡುವಲ್ಲೇ ಭಾರತದ ವಿರುದ್ಧವಾಗಿ ದ್ವೇಷ ಹಾಗೂ ನಕಲಿ ಸುದ್ದಿ ಪ್ರಸಾರ ಮಾಡುತ್ತಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ (ನಿಷೇಧ) ಮಾಡಿದೆ ಎಂದು ತಿಳಿದುಬಂದಿದೆ.* ನಿಷೇಧಿತ ಯೂಟ್ಯೂಬ್ ಚಾನೆಲ್ಗಳು ಒಟ್ಟಾರೆಯಾಗಿ ಸುಮಾರು 63 ಮಿಲಿಯನ್ ಚಂದಾದಾರರನ್ನು ಹೊಂದಿತ್ತು.* ಚಾನೆಲ್ ಗಳು : ಡಾನ್ ನ್ಯೂಸ್, ಇರ್ಶಾದ್ ಭಟ್ಟಿ, ಸಮಾ ಟಿ.ವಿ., ಎಆರ್ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ದಿ ಪಾಕಿಸ್ತಾನ್ ರೆಫರೆನ್ಸ್, ಜಿಯೊ ನ್ಯೂಸ್, ಸಮಾ ಸ್ಪೋರ್ಟ್ಸ್, ಜಿಎನ್ಎನ್, ಉಜೈರ್ ಕ್ರಿಕೆಟ್, ಉಮರ್ ಚೀಮಾ ಎಕ್ಸ್ಕ್ಲೂಸಿವ್, ಅಸ್ಮಾ ಶಿರಾಝಿ, ಮುನೀಬ್ ಫರೂಕಿ, ಸುನೊ ನ್ಯೂಸ್ ಮತ್ತು ರಾಝಿ ನಾಮ ಚಾನೆಲ್ಗಳ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ.* ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ನಂತಹ ಪತ್ರಕರ್ತರು ನಿರ್ವಹಿಸುವ ಯೂಟ್ಯೂಬ್ ಚಾನೆಲ್ಗಳನ್ನೂ ಸಹ ಭಾರತೀಯ ಬಳಕೆದಾರರಿಗೆ ನಿರ್ಬಂಧಿಸಲಾಗಿದೆ.