* ಪಾಕಿಸ್ತಾನ (Pakistan)ದ ಕಡಲ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೃಹತ್‌ ಸಂಗ್ರಹ ಪತ್ತೆಯಾಗಿದ್ದು,ಇದು ಆರ್ಥಿಕವಾಗಿ ತತ್ತರಿಸಿದರುವ ಆ ದೇಶಕ್ಕೆ ಚೇತರಿಕೆ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.* ಪ್ರಸ್ತುತ ವೆನೆಜುವೆಲಾ ಸುಮಾರು 3.4 ಬಿಲಿಯನ್ ಬ್ಯಾರೆಲ್‌ಗಳೊಂದಿಗೆ ತೈಲ ನಿಕ್ಷೇಪದಲ್ಲಿ ಮುಂಚೂಣಿಯಲ್ಲಿದೆ. ಸೌದಿ ಅರೇಬಿಯಾ, ಇರಾನ್, ಕೆನಡಾ ಮತ್ತು ಇರಾಕ್ ನಂತರದ ಸ್ಥಾನಗಳಲ್ಲಿವೆ. ಅದಾಗ್ಯೂ ಅಮೆರಿಕ ಹೆಚ್ಚು ಬಳಕೆಯಾಗದ ಶೇಲ್ ತೈಲ ನಿಕ್ಷೇಪಗಳನ್ನು ಹೊಂದಿದೆ.* ನೀರಿನಲ್ಲಿ ತೈಲ ಮತ್ತು ಅನಿಲಗಳಿರುವ ಬಗ್ಗೆ ಪರಿಶೀಲಿಸಲು ಸ್ನೇಹಯುತ ರಾಷ್ಟ್ರದ ಸಹಯೋಗದೊಂದಿಗೆ 3 ವರ್ಷಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ಸೆಪ್ಟೆಂಬರ್ 06 ರಂದು (ಶುಕ್ರವಾರ) ಹಿರಿಯ ಭದ್ರತಾ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.