Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅಭಿನಯ ಸರಸ್ವತಿ ಬಿ. ಸರೋಜಾದೇವಿಗೆ ಆಸ್ಕರ್ ಗೌರವ: ವಿಶ್ವ ವೇದಿಕೆಯಲ್ಲಿ ಕನ್ನಡದ ಹಿರಿಮೆ!
Authored by:
Akshata Halli
Date:
20 ಮಾರ್ಚ್ 2026
➤
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಕ್ಷರ ದಾಖಲಾಗಿದೆ. ದಶಕಗಳ ಕಾಲ ಭಾರತೀಯ ಚಿತ್ರರಂಗವನ್ನು ಆಳಿದ, 'ಅಭಿನಯ ಸರಸ್ವತಿ' ಎಂದೇ ಖ್ಯಾತರಾದ
ಬಿ. ಸರೋಜಾದೇವಿ
ಅವರಿಗೆ ಪ್ರತಿಷ್ಠಿತ ಆಸ್ಕರ್ ಅಕಾಡೆಮಿಯು (The Academy of Motion Picture Arts and Sciences) ವಿಶೇಷ ಗೌರವ ಸಲ್ಲಿಸಿದೆ.
➤
ಕ್ಯಾಲಿಫೋರ್ನಿಯಾದಲ್ಲಿ ನೆಲೆಗೊಂಡಿರುವ ಆಸ್ಕರ್ ಅಕಾಡೆಮಿಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಇತ್ತೀಚೆಗೆ ಅಗಲಿದ ವಿಶ್ವದ ಖ್ಯಾತ ತಾರೆಗಳಿಗೆ ನಮನ ಸಲ್ಲಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ನಾಲ್ವರು ಪ್ರಮುಖ ಕಲಾವಿದರನ್ನು ಗುರುತಿಸಿರುವುದು ವಿಶೇಷ.
1.ಬಿ. ಸರೋಜಾದೇವಿ (ಕನ್ನಡ):
ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ದಕ್ಷಿಣ ಭಾರತದ ಚಿತ್ರರಂಗದ ಐಕಾನ್ ಎನಿಸಿಕೊಂಡವರು.
2.ಧರ್ಮೇಂದ್ರ :
ಬಾಲಿವುಡ್ನ ದಂತಕಥೆಗಳಾದ ಇವರ ಸಿನಿಮೀಯ ಕೊಡುಗೆಯನ್ನು ಅಕಾಡೆಮಿ ಸ್ಮರಿಸಿದೆ.
3.ಕೋಟಾ ಶ್ರೀನಿವಾಸರಾವ್:
ತೆಲುಗಿನ ಬಹುಮುಖ ಪ್ರತಿಭೆಯ ನಟ ಕೋಟಾ ಅವರಿಗೂ ಆಸ್ಕರ್ ಗೌರವ ಸಲ್ಲಿಸಲಾಗಿದೆ.
4.ಮನೋಜ್ ಕುಮಾರ್:
ಬಾಲಿವುಡ್ನ ದಂತಕಥೆಗಳಾದ ಇವರ ಸಿನಿಮೀಯ ಕೊಡುಗೆಯನ್ನು ಅಕಾಡೆಮಿ ಸ್ಮರಿಸಿದೆ.
➤
ಸಾಮಾನ್ಯವಾಗಿ ಆಸ್ಕರ್ ಅಕಾಡೆಮಿಯು 'In Memoriam' ವಿಭಾಗದಲ್ಲಿ ಜಾಗತಿಕ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರನ್ನು ಮಾತ್ರ ಸ್ಮರಿಸುತ್ತದೆ. ಕನ್ನಡತಿಯೊಬ್ಬರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಮತ್ತು ಒಟ್ಟಾರೆ ಭಾರತೀಯ ಚಿತ್ರರಂಗಕ್ಕೆ ಸಂದ ದೊಡ್ಡ ಗೌರವವಾಗಿದೆ.
➤
ಬಿ. ಸರೋಜಾದೇವಿ ಅವರು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದು, ಡಾ. ರಾಜ್ಕುಮಾರ್ ಸೇರಿದಂತೆ ಭಾರತದ ಎಲ್ಲಾ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಅಪ್ರತಿಮ ನಟಿ.
Take Quiz
Loading...