Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆಸ್ಕರ್ ಅವಾರ್ಡ್ಸ್ 2026: 98ನೇ ಅಕಾಡೆಮಿ ಪ್ರಶಸ್ತಿಯ ವಿಜೇತರ ಸಂಪೂರ್ಣ ಪಟ್ಟಿ ಮತ್ತು ಹೈಲೈಟ್ಸ್
Authored by:
Akshata Halli
Date:
17 ಮಾರ್ಚ್ 2026
➤
ಹಾಲೋವುಡ್, ಲಾಸ್ ಏಂಜಲೀಸ್:
ಚಲನಚಿತ್ರ ರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲ್ಪಟ್ಟಿರುವ 98ನೇ ಅಕಾಡೆಮಿ ಪ್ರಶಸ್ತಿ (Oscars 2026) ಪ್ರದಾನ ಸಮಾರಂಭವು ಲಾಸ್ ಏಂಜಲೀಸ್ನ ಐಕಾನಿಕ್ 'ಡಾಲ್ಬಿ ಥಿಯೇಟರ್'ನಲ್ಲಿ ಅದ್ಧೂರಿಯಾಗಿ ಜರುಗಿತು.
ಈ ಬಾರಿಯ ಆಸ್ಕರ್ ರೇಸ್ನಲ್ಲಿ 'ಒನ್ ಬ್ಯಾಟಲ್ ಆಫ್ಟರ್ ಅನದರ್' (One Battle After Another) ಮತ್ತು 'ಸಿನ್ನರ್ಸ್' (Sinners) ಚಿತ್ರಗಳು ಅತಿ ಹೆಚ್ಚು ವಿಭಾಗಗಳಲ್ಲಿ ಪೈಪೋಟಿ ನಡೆಸಿ ಗಮನ ಸೆಳೆದಿವೆ.
➤
ಪ್ರಮುಖ ಹೈಲೈಟ್ಸ್:
ಸಿನ್ನರ್ಸ್ (Sinners):
ರಿಯಾನ್ ಕೂಗ್ಲರ್ ನಿರ್ದೇಶನದ ಈ ಚಿತ್ರವು ಬರೋಬ್ಬರಿ 16 ನಾಮನಿರ್ದೇಶನಗಳನ್ನು ಪಡೆಯುವ ಮೂಲಕ ದಾಖಲೆ ಬರೆಯಿತಾದರೂ, ಅಂತಿಮವಾಗಿ 4 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.
ಒನ್ ಬ್ಯಾಟಲ್ ಆಫ್ಟರ್ ಅನದರ್:
ಲಿಯೊನಾರ್ಡೊ ಡಿಕಾಪ್ರಿಯೊ ನಟನೆಯ ಈ ಚಿತ್ರವು 13 ನಾಮನಿರ್ದೇಶನಗಳಲ್ಲಿ 6 ಪ್ರಶಸ್ತಿಗಳನ್ನು ಗೆದ್ದು ಬೀಗಿದೆ.
ಗಿಲ್ಲೆರ್ಮೊ ಡೆಲ್ ಟೊರೊ ಅವರ 'ಫ್ರಾಂಕೆನ್ಸ್ಟೈನ್' (Frankenstein):
ತಾಂತ್ರಿಕ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿ 3 ಪ್ರಶಸ್ತಿಗಳನ್ನು ಗೆದ್ದಿದೆ.
ಮಾರ್ಟಿ ಸುಪ್ರೀಮ್:
ತಿಮೋತಿ ಚಾಲಮೆಟ್ ನಟನೆಯ ಈ ಚಿತ್ರ 9 ನಾಮಿನೇಷನ್ ಪಡೆದರೂ ಒಂದೂ ಪ್ರಶಸ್ತಿ ಗೆಲ್ಲಲಾಗದೆ ನಿರಾಸೆ ಅನುಭವಿಸಿತು.
➤
98ನೇ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ:
ಅತ್ಯುತ್ತಮ ಚಿತ್ರ (Best Picture): ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ನಿರ್ದೇಶಕ: ಪಾಲ್ ಥಾಮಸ್ ಆಂಡರ್ಸನ್: ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ನಟ: ಮೈಕೆಲ್ ಬಿ ಜೋರ್ಡಾನ್ ಸಿನ್ನರ್ಸ್ (Sinners)
ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿಹ್ಯಾಮ್ನೆಟ್ (Hamnet)
ಅತ್ಯುತ್ತಮ ಪೋಷಕ ನಟ: ಸೀನ್ ಪೆನ್: ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಪೋಷಕ ನಟಿ: ಆಮಿ ಮ್ಯಾಡಿಗನ್ವೆಪನ್ಸ್ (Weapons)
ಅತ್ಯುತ್ತಮ ಅನಿಮೇಟೆಡ್ ಚಿತ್ರ: ಕೆ-ಪಾಪ್: ಡೆಮನ್ ಹಂಟರ್ಸ್
ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ: ಸೆಂಟಿಮೆಂಟಲ್ ವ್ಯಾಲ್ಯೂ (ನಾರ್ವೆ)
ಅತ್ಯುತ್ತಮ ಮೂಲ ಚಿತ್ರಕಥೆ: ಸಿನ್ನರ್ಸ್ (Sinners)
ಅತ್ಯುತ್ತಮ ರೂಪಾಂತರ ಚಿತ್ರಕಥೆ: ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಸಿನಿಮಾಟೋಗ್ರಫಿ: ಸಿನ್ನರ್ಸ್ (Sinners)
ಅತ್ಯುತ್ತಮ ದೃಶ್ಯ ಪರಿಣಾಮ (VFX): ಅವತಾರ್: ಫೈರ್ ಅಂಡ್ ಆಶ್
ಅತ್ಯುತ್ತಮ ಸಂಕಲನ (Editing): ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಮೂಲ ಗೀತೆ: 'ಗೋಲ್ಡನ್'ಕೆ-ಪಾಪ್: ಡೆಮನ್ ಹಂಟರ್ಸ್
➤
ತಾಂತ್ರಿಕ ಮತ್ತು ಇತರ ಪ್ರಶಸ್ತಿಗಳು:
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಫ್ರಾಂಕೆನ್ಸ್ಟೈನ್
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್: ಫ್ರಾಂಕೆನ್ಸ್ಟೈನ್
ಅತ್ಯುತ್ತಮ ಮೇಕಪ್ ಮತ್ತು ಹೇರ್ಸ್ಟೈಲಿಂಗ್: ಫ್ರಾಂಕೆನ್ಸ್ಟೈನ್
ಅತ್ಯುತ್ತಮ ಸೌಂಡ್: F1
ಅತ್ಯುತ್ತಮ ಕ್ಯಾಸ್ಟಿಂಗ್: ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಸಾಕ್ಷ್ಯಚಿತ್ರ (Documentary Feature): ಮಿಸ್ಟರ್ ನೋಬಡಿ ಎಗೇನ್ಸ್ಟ್ ಪುಟಿನ್
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ದಿ ಸಿಂಗರ್ಸ್ & ಟೂ ಪೀಪಲ್ ಎಕ್ಸ್ಚೇಂಜಿಂಗ್ ಸಲೈವಾ (ಜಂಟಿ ವಿಜೇತರು)
➤
ಭಾರತೀಯ ಮೂಲದ ನಿರ್ದೇಶಕ
ಅಲೆಕ್ಸಾಂಡರ್ ಸಿಂಗ್ (Alexandre Singh)
ಅವರು ನಿರ್ದೇಶಿಸಿದ 'ಟೂ ಪೀಪಲ್ ಎಕ್ಸ್ಚೇಂಜಿಂಗ್ ಸಲೈವಾ' (Two People Exchanging Saliva) ಚಿತ್ರಕ್ಕೆ
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ
ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
Take Quiz
Loading...