* ರಾಜ್ಯದಲ್ಲಿ ಓಲಾ, ಊಬರ್ ಮಾದರಿಯ ಆಂಬುಲೆನ್ಸ್ ಸೇವೆ ಆರಂಭವಾಗಲಿದೆ. ಆ್ಯಪ್ ಬಳಸಿ ಟ್ಯಾಕ್ಸಿ ಬುಕ್ ಮಾಡುವಂತೆ, ಇನ್ನು ಮುಂದೆ ಆಂಬುಲೆನ್ಸ್ ಸೇವೆಯನ್ನೂ ಮೊಬೈಲ್ ಆ್ಯಪ್ ಮೂಲಕ ಕರೆಸಬಹುದಾಗುತ್ತದೆ.* ಈಗಾಗಲೇ ಗುರುಗ್ರಾಮದಲ್ಲಿ ಖಾಸಗಿ ಸಂಸ್ಥೆ ಈ ಮಾದರಿಯ ಸೇವೆ ಆರಂಭಿಸಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ಆಂಬುಲೆನ್ಸ್ ಸೇವೆ ನೀಡಲು ಯೋಜನೆ ರೂಪಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಾರ, ಈ ಸೇವೆಗೆ ಸರ್ಕಾರವೇ ದರ ನಿಗದಿಪಡಿಸಲಿದೆ.* ಆಂಬುಲೆನ್ಸ್ ಸೇವೆಯ ಮೇಲೆ ಮಾನದಂಡ ಸ್ಥಾಪಿಸಲು ಹಾಗೂ ದುಡ್ಡು ಲೂಟಿ ತಡೆಯಲು ಹೊಸ ಕಾಯಿದೆ ತರಲಾಗುತ್ತಿದೆ. ಖಾಸಗಿ ಆಂಬುಲೆನ್ಸ್ಗಳು ಇದೀಗ ಕೆಪಿಎಂಇ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಬೇಕು.* ಸರ್ಕಾರದ 108 ಆಂಬುಲೆನ್ಸ್ ಸೇವೆಯನ್ನೂ ಖಾಸಗಿ ಸಂಸ್ಥೆಗಳಿಂದ ಹಿಂದಕ್ಕೆ ಪಡೆದು, ಜಿಲ್ಲಾಧಿಕಾರಿ, ಸಿಇಒ ಹಾಗೂ ಆರೋಗ್ಯಾಧಿಕಾರಿ ಕಂಟ್ರೋಲ್ಗೆ ತರಲಾಗುತ್ತದೆ.