Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಓಲಾ-ಉಬರ್ಗೆ ಸೆಡ್ಡು ಹೊಡೆಯಲು ಬಂತು ‘ಭಾರತ್ ಟ್ಯಾಕ್ಸಿ’: ಚಾಲಕರೇ ಇಲ್ಲಿ ಮಾಲೀಕರು!
2 ಜನವರಿ 2026
*ಭಾರತದ ಸಾರಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆಯೊಂದು ಸಂಭವಿಸುತ್ತಿದೆ. ಕೇಂದ್ರ ಸಹಕಾರ ಸಚಿವಾಲಯದ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ
'ಭಾರತ್ ಟ್ಯಾಕ್ಸಿ'
ಆ್ಯಪ್ ಜನವರಿ 1, 2026ರಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿದ್ದು, ಜನವರಿ ಅಂತ್ಯದ ವೇಳೆಗೆ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಪೂರ್ಣ ಪ್ರಮಾಣದ ಸೇವೆಗೆ ಸಿದ್ಧವಾಗಿದೆ.
ಖಾಸಗಿ ಕ್ಯಾಬ್ ಕಂಪನಿಗಳ ಏಕಸ್ವಾಮ್ಯವನ್ನು ಕೊನೆಗಾಣಿಸಿ, ಚಾಲಕರಿಗೆ ನ್ಯಾಯಯುತ ಆದಾಯ ಮತ್ತು ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣ ಒದಗಿಸುವುದು ಈ ಯೋಜನೆಯ ಮೂಲ ಮಂತ್ರವಾಗಿದೆ.
* ಭಾರತ್ ಟ್ಯಾಕ್ಸಿ ಆಪ್ ಅನ್ನು 2025ರ ಡಿಸೆಂಬರ್ 2ರಂದು ದೆಹಲಿಯಲ್ಲಿ ಪೈಲಟ್ ಆಧಾರದ ಮೇಲೆ ಪ್ರಾರಂಭಿಸಲಾಗಿತ್ತು. ಅದಾದ ಬಳಿಕ ಪ್ರತಿದಿನ ಸರಾಸರಿ
5,500 ಪ್ರಯಾಣಗಳು
ನಡೆದಿದ್ದು, ಇದರಲ್ಲಿ ಸುಮಾರು
4,000 ಏರ್ಪೋರ್ಟ್ ಪ್ರಯಾಣಗಳು
ಮತ್ತು
1,500 ಇತರೆ ಸ್ಥಳಗಳ ಪ್ರಯಾಣಗಳು
ಸೇರಿವೆ. ಕ್ಯಾಬ್, ಆಟೋ ಮತ್ತು ಬೈಕ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ನೀಡಲಾಗುತ್ತಿದೆ. ಈಗಾಗಲೇ
1.4 ಲಕ್ಷಕ್ಕೂ ಹೆಚ್ಚು ಚಾಲಕರು
ಆಪ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
* ಈ ಆ್ಯಪ್ ಅನ್ನು
ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ (ಸಹಕಾರ್ ಟ್ಯಾಕ್ಸಿ)
ನಿರ್ವಹಿಸುತ್ತಿದ್ದು, ಇದಕ್ಕೆ
ಭಾರತದ ಎಂಟು ಬಲಿಷ್ಠ ಸಹಕಾರಿ ಮತ್ತು ಹಣಕಾಸು ಸಂಸ್ಥೆಗಳ ಬೆಂಬಲ
ಇದೆ. ಪ್ರಮುಖವಾಗಿ
IFFCO ಮತ್ತು KRIBHCO
,
Amul (GCMMF)
, ಹಾಗೆಯೇ
NABARD ಮತ್ತು NCDC
, ಜೊತೆಗೆ
NDDB, NAFED ಮತ್ತು NCEL
ಸಂಸ್ಥೆಗಳು ಈ ಯೋಜನೆಗೆ ಬಲವಾದ ಬೆನ್ನೆಲುಬಾಗಿ ನಿಂತಿದ್ದು, ಸಹಕಾರಿ ಚಳವಳಿಗೆ ಹೊಸ ಆಯಾಮ ನೀಡುತ್ತಿವೆ.
*
ಭಾರತ್ ಟ್ಯಾಕ್ಸಿ
ಯೋಜನೆಯನ್ನು ಕೇಂದ್ರ ಸಹಕಾರ ಸಚಿವ
ಅಮಿತ್ ಶಾ ಅವರು ಮಾರ್ಚ್ 2024ರಲ್ಲಿ ಘೋಷಿಸಿದ್ದು,
ಚಾಲಕರನ್ನು ಕೇಂದ್ರಬಿಂದುಗೊಳಿಸಿ ಖಾಸಗಿ ಕ್ಯಾಬ್ ಕಂಪನಿಗಳ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಓಲಾ, ಊಬರ್, ರಾಪಿಡೋಗಳಿಗೆ ಸ್ಪರ್ಧಿಯಾಗಿರುವ ಈ ಆಪ್ನಲ್ಲಿ
ಚಾಲಕರಿಂದ ಯಾವುದೇ ಕಮಿಷನ್ ವಸೂಲಿ ಇಲ್ಲ
; ವಾರ್ಷಿಕ ಡಿವಿಡೆಂಡ್, ಲಾಭದಲ್ಲಿ ಪಾಲು ಹಾಗೂ ವಿಮಾ ಸೌಲಭ್ಯಗಳಿವೆ.
* ಮೆಟ್ರೋ ಸೇರಿದಂತೆ ಇತರೆ ಸಾರಿಗೆ ವ್ಯವಸ್ಥೆಗಳೊಂದಿಗೆ ಈ ಆಪ್ ಏಕೀಕೃತವಾಗಿದ್ದು, ಬಹುಮಾಧ್ಯಮ ಪ್ರಯಾಣಕ್ಕೆ ಅವಕಾಶ ನೀಡುತ್ತದೆ. ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ದೆಹಲಿ ಪೊಲೀಸ್ ಇಲಾಖೆಯೊಂದಿಗೆ ಸಹಭಾಗಿತ್ವವೂ ಮಾಡಲಾಗಿದೆ.
Take Quiz
Loading...