* ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು.   ಬಿಜೆಪಿ ನಾಯಕ ಮೋಹನ್ ಚರಣ್ ಮಾಂಝಿ ಅವರು ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜೂನ್ 11 ರಂದು (ಮಂಗಳವಾರ) ಘೋಷಿಸಿದ್ದಾರೆ.* ಮಾಂಝಿ ಅವರು ರಾಜ್ಯದ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಮಾಂಝಿ ಅವರು ಬಿಜೆಡಿ ಅಭ್ಯರ್ಥಿ ಮಿನಾ ಮಾಂಝಿ ಅವರನ್ನು 11,000 ಮತಗಳಿಂದ ಸೋಲಿಸಿದ್ದರು. * ಜೂನ್ 12ರಂದು ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಂಝಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ ಬಿಜೆಪಿ ನಾಯಕರಾದ ಕೆವಿ ಸಿಂಘ್‌ದೇವ್ ಮತ್ತು ಪ್ರವತಿ ಪರಿದಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.* ಒಡಿಶಾ ವಿಧಾನಸಭೆಯಲ್ಲಿ 147 ಸ್ಥಾನಗಳಿದ್ದರೆ, ಬಿಜೆಪಿ 78, ಬಿಜೆಡಿ 51, ಕಾಂಗ್ರೆಸ್ 14 ಮತ್ತು ಇತರರು 4 ಸ್ಥಾನಗಳನ್ನು ಗೆದ್ದಿದ್ದಾರೆ.* ಮೋಹನ್ ಚರಣ್ ಮಾಝಿ ಅವರು 2000, 2004, 2019 ಮತ್ತು 2024 ರಲ್ಲಿ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.