* ಲೋಕಸಭೆಯು ಮಂಗಳವಾರ (ಮಾರ್ಚ್ 25) ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧಿಕಾರಾವಧಿಯನ್ನು ಮುಂಗಾರು ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ಅಂಗೀಕಾರ ನೀಡಿದೆ.* ಜೆಪಿಸಿಯ ಅಧ್ಯಕ್ಷ ಪಿಪಿ ಚೌಧರಿ, ಸಂವಿಧಾನ ನೂ. 129 ತಿದ್ದುಪಡಿ ಮಸೂದೆ 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ 2024 ಕುರಿತ ವರದಿ ಮಂಡಿಸಲು ಸಮಯ ವಿಸ್ತರಿಸುವ ಪ್ರಸ್ತಾವನೆ ಮಂಡಿಸಿದರು.* ಸಮಿತಿ ಸಭೆ ಸೇರಲಿದ್ದು, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ದೆಹಲಿ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಟೆಲಿಕಾಂ ವಿವಾದಗಳ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಡಿಎನ್ ಪಟೇಲ್ ಅವರು ಜೆಪಿಸಿಯ ಮುಂದೆ ಪ್ರಾತಿನಿಧ್ಯ ವಹಿಸಲಿದ್ದಾರೆ.* ಸಭೆಯ ಮುಂದಿನ ಹಂತದಲ್ಲಿ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ 21ನೇ ಕಾನೂನು ಆಯೋಗದ ಮಾಜಿ ಅಧ್ಯಕ್ಷ ಬಿಎಸ್ ಚೌಹಾಣ್ ಅವರೊಂದಿಗೆ ಚರ್ಚೆ ನಡೆಯಲಿದೆ.* ಈ ಮಸೂದೆಗಳ ಪರಿಗಣನೆ ಸಂವಿಧಾನ ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಯಂತ್ರಣ ಸಂಬಂಧ ಮಹತ್ತರ ಬದಲಾವಣೆಗಳನ್ನು ಉಂಟುಮಾಡುವ ಉದ್ದೇಶ ಹೊಂದಿದೆ.