* ದೇಶದಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ' ಸಾಧ್ಯತೆಯನ್ನು ಅವಲೋಕಿಸಲು ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ ಎಂದು ಸೆಪ್ಟೆಂಬರ್ 1 ರಂದು ಮೂಲಗಳು ತಿಳಿಸಿವೆ.* ಸೆಪ್ಟೆಂಬರ್ 18 ಮತ್ತು 22 ರ ನಡುವೆ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದ ಒಂದು ದಿನದ ಬಳಿಕ ಈ ಮಾಹಿತಿ ಹೊರಬಿದ್ದಿದೆ.* ಒಟ್ಟು 5 ಅವಧಿಗಳು ಇರಲಿವೆ. 17ನೇ ಲೋಕಸಭೆಯ 13 ನೇ ಅಧಿವೇಶನ ಹಾಗೂ ರಾಜ್ಯಸಭೆಯ 261ನೇ ಅಧಿವೇಶನ ಇದಾಗಿರಲಿದೆ.* ಪ್ರಸ್ತುತ ಲೆಕ್ಕಾಚಾರದ ಪ್ರಕಾರ ಒಂದು ಬಾರಿ ದೇಶದಲ್ಲಿ ಚುನಾವಣೆ ಪ್ರಕ್ರಿಯೆಗೆ 50 ಸಾವಿರ ಕೋಟಿ ರೂ ಗಳಿಂದ 60  ಸಾವಿರ ಕೋಟಿ ರೂ ವೆಚ್ಚವಾಗಿತ್ತದೆ.