* ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ವಿಲೀನಕ್ಕೆ ಕೇಂದ್ರ ಸರಕಾರ ಅಧಿಕೃತ ಅನುಮೋದನೆ ನೀಡಿದ್ದು, ಮೇ 1ರಿಂದ ‘ಒಂದು ರಾಜ್ಯ, ಒಂದು ಆರ್ಆರ್ಬಿ’ ತತ್ವದಡಿ ವಿಲೀನ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದೆ.* ಈ ವಿಲೀನದಿಂದ ದೇಶದಲ್ಲಿನ 43 ಆರ್ಆರ್ಬಿಗಳ ಸಂಖ್ಯೆ 28ಕ್ಕೆ ಇಳಿಯಲಿದ್ದು, ಬ್ಯಾಂಕ್ಗಳ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ವೆಚ್ಚ ಕಡಿಮೆ ಮಾಡುವ ಉದ್ದೇಶವಿದೆ.* ವಿಲೀನಕ್ಕೆ ಸಂಬಂಧಿಸಿದ ಎಲ್ಲಾ ಕ್ರಮಗಳು ಈಗಾಗಲೇ ಪೂರ್ಣಗೊಂಡಿವೆ. ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 15 ಬ್ಯಾಂಕ್ಗಳು ಈ ವಿಲೀನದ ಅಡಿಯಲ್ಲಿ ಬರುತ್ತವೆ.* ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಬ್ಯಾಂಕ್ಗಳನ್ನು ವಿಲೀನಗೊಳಿಸಲಾಗುವುದು ಎಂದು ಅಧಿಸೂಚನೆ ತಿಳಿಸಿದೆ.* ಆರ್ಆರ್ಬಿ ಕಾಯಿದೆ 1976ರ ಸೆಕ್ಷನ್ 23ಎ (1)ರ ಅಡಿಯಲ್ಲಿ ದೊರಕಿರುವ ಅಧಿಕಾರದ ಮೂಲಕ ಸಾರ್ವಜನಿಕ ಹಿತದೃಷ್ಟಿಯಿಂದ ಈ ವಿಲೀನ ನಡೆಯುತ್ತಿದೆ.* ಕರ್ನಾಟಕದಲ್ಲಿ ಇರುವ 'ಕರ್ನಾಟಕ ಗ್ರಾಮೀಣ ಬ್ಯಾಂಕ್' ಮತ್ತು 'ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್' ಅನ್ನು ಒಂದು ಬ್ಯಾಂಕ್ ಆಗಿ ವಿಲೀನಗೊಳಿಸಲಾಗಲಿದೆ.