* ದೇಶದ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 22 ಸಾವಿರಕ್ಕಿಂತ ಹೆಚ್ಚಿನ ಶಾಖೆಗಳನ್ನು ಹೊಂದಿರುವ 28 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು (ಆರ್ಆರ್ಬಿ) ಕಾರ್ಯನಿರ್ವಹಿಸುತ್ತಿವೆ ಎಂದು ಗುರುವಾರ ಎಕ್ಸ್ನಲ್ಲಿ ಪ್ರಕಟಿಸಲಾಗಿದೆ.* ಈ ವಿಲೀನದ ಮೂಲಕ ಬ್ಯಾಂಕ್ಗಳ ಕಾರ್ಯಚಟುವಟಿಕೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯುವಂತೆ ಮಾಡುವುದರ ಜೊತೆಗೆ ವೆಚ್ಚ ಕಡಿತಗೊಳಿಸಿ ಆರ್ಥಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶವಿದೆ.* ಈ ವಿಲೀನದಿಂದಾಗಿ ದೇಶದ ಪ್ರಸ್ತುತ 43 ಆರ್ಆರ್ಬಿಗಳ ಸಂಖ್ಯೆ 28ಕ್ಕೆ ಕುಸಿತಗೊಂಡಿದೆ ಎಂದು ತಿಳಿಸಲಾಗಿದೆ.* ವಿಲೀನದ ಫಲವಾಗಿ ಏಕೀಕೃತ ಬ್ಯಾಂಕ್ಗಳ ಬಂಡವಾಳ ಶಕ್ತಿ ಹೆಚ್ಚಳವಾಗಲಿದೆ. ಪ್ರತಿಯೊಂದು ಬ್ಯಾಂಕ್ನಿಗೂ ₹2,000 ಕೋಟಿ ಬಂಡವಾಳವಿರಲಿದೆ ಎಂದು ಹೇಳಲಾಗಿದೆ.