* ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಘೋಷವಾಕ್ಯವನ್ನು ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂದು ಘೋಷಿಸಿದ್ದಾರೆ. ಅವರು ಯೋಗದ ಮಹತ್ವವನ್ನು ಪ್ರತಿಪಾದಿಸಿ, ಫಿಟ್ನೆಸ್ ಜೊತೆಗೆ ಯೋಗದ ಅಭ್ಯಾಸಕ್ಕೂ ಒತ್ತು ನೀಡಿದ್ದಾರೆ. * ಹಿನ್ನಲೆ : 2014ರಲ್ಲಿ ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅನುಮೋದನೆ ನೀಡಿದ್ದು, 2015ರ ಜೂನ್ 21ರಂದು ಪ್ರಥಮ ಬಾರಿಗೆ ಆಚರಣೆ ಮಾಡಲಾಯಿತು. ಜೂನ್ 21 ಸುದೀರ್ಘ ಹಗಲು ಇರುವ ದಿನವಾಗಿರುವುದರಿಂದ ಅದನ್ನು ಆಯ್ಕೆ ಮಾಡಲಾಗಿದೆ. * ಮಹತ್ವ : ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಯೋಗಾಭ್ಯಾಸದಿಂದ ರಕ್ತಪರಿಚಲನೆ, ಜೀರ್ಣಕ್ರಿಯೆ ಸುಧಾರಣೆ, ಒತ್ತಡ ನಿರ್ವಹಣೆ ಮತ್ತು ಉತ್ತಮ ನಿದ್ರೆ ಸಾಧ್ಯವಾಗುತ್ತದೆ. ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಅಥವಾ ಪ್ರವಾಸದಲ್ಲಿ ಸರಳ ಯೋಗ ಭಂಗಿಗಳನ್ನು ಮಾಡುವುದು ಆರೋಗ್ಯ ಸುಸ್ಥಿರವಾಗಲು ನೆರವಾಗುತ್ತದೆ.