* ಭಾರತವು ʻಒನ್ ಓಷನ್ ಒನ್ ಮಿಷನ್ʼ ಎಂಬ ಧ್ಯೇಯವಾಕ್ಯದಡಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಮಹತ್ವದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.* ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸಾಗರ ದಿನದಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರವಾರದಲ್ಲಿ ಚಾಲನೆ ನೀಡಿದರು.* ಚೀನಾದ ಪ್ರಾಬಲ್ಯ ಹೆಚ್ಚಾಗುತ್ತಿರುವ ಸಮಯದಲ್ಲಿ, ಭಾರತ 9 ಮಿತ್ರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಈ ಹೆಜ್ಜೆಯನ್ನಿಟ್ಟಿದೆ.* ಈ ಯೋಜನೆಯಡಿಯಲ್ಲಿ INS ಸುನೈನಾ ಹಡಗು ಕಾರ್ಯಾಚರಣೆಗೆ ನಿಯೋಜನೆಯಾಗಿದ್ದು, ಹಡಗಿನಲ್ಲಿ ಕೀನ್ಯಾ, ಮಾಲ್ಡೀವ್ಸ್, ಮಡ್ಗಾಸ್ಕರ್, ಮಾರಿಶಸ್, ಶ್ರೀಲಂಕಾ, ಮೊಝಾಂಬಿಕ್, ದಕ್ಷಿಣ ಆಫ್ರಿಕಾ, ಕೊಮೊರೋಸ್ ಹಾಗೂ ಸೇಚೆಲ್ಸ್ ಸೇರಿದಂತೆ 9 ದೇಶಗಳ 44 ಸಿಬ್ಬಂದಿ ಇದ್ದಾರೆ.* ಈ ಸಿಬ್ಬಂದಿಗೆ ಸಾಗರ ಭದ್ರತೆ, ಗಸ್ತು, ಹಡಗು ಪರಿಶೀಲನೆ, ಅಗ್ನಿಶಮನ ಹಾಗೂ ಸಾಗರ ಸಂವಹನ ಮುಂತಾದ ವಿಷಯಗಳ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.* ಈ ಕಾರ್ಯಾಚರಣೆಯ ಮೂಲಕ ಭಾರತವು ಹಿಂದೂ ಮಹಾಸಾಗರದ ಸುರಕ್ಷತೆ ಮಾತ್ರವಲ್ಲ, ಮಿತ್ರ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದು, ಈ ವಲಯದ ಶಾಂತಿ ಹಾಗೂ ಸಹಕಾರದ ಪ್ರತಿರೂಪವಾಗಿ ತನ್ನ ನಾಯಕರಾಗಲು ಹೊರಟಿದೆ.