* ಪರಿಶಿಷ್ಟ ಜಾತಿಗಳ 101 ಜಾತಿಗಳನ್ನು ಐದು ಗುಂಪುಗಳಾಗಿ ವಿಭಜಿಸಿ, ಲಭ್ಯವಿರುವ ಶೇಕಡಾ 17 ಮೀಸಲಾತಿಯನ್ನು ಆಯೋಗ ಹಂಚಿದೆ. ಈ ವರ್ಗೀಕರಣವು ಸುಪ್ರೀಂ ಕೋರ್ಟ್ನ ಮಾನದಂಡಗಳ ಆಧಾರದಲ್ಲಿಯೇ ವಿಜ್ಞಾನಾಧಾರಿತವಾಗಿ ಮಾಡಲಾಗಿದೆ.* ಮೀಸಲಾತಿ ಹಂಚಿಕೆ ವಿವರ:• ಗುಂಪು 1 (ಅತೀ ಹಿಂದುಳಿದ ಜಾತಿಗಳು): ಶೇ 1 ಮೀಸಲಾತಿ• ಗುಂಪು 2 (ಎಡಗೈ ಜಾತಿಗಳು): ಶೇ 6• ಗುಂಪು 3 (ಬಲಗೈ ಜಾತಿಗಳು): ಶೇ 5• ಗುಂಪು 4 (ಬಂಜಾರ, ಬೋವಿ, ಕೊರಚ, ಕೊರಮ – ಅಸ್ಪೃಶ್ಯರಲ್ಲದವರು): ಶೇ 4• ಗುಂಪು 5 (ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ): ಶೇ 1* ಮೇ 5 ರಿಂದ ಜುಲೈ 6ರ ನಡುವೆ ನಡೆದ ಸಮೀಕ್ಷೆಯಲ್ಲಿ 27.24 ಲಕ್ಷ ಕುಟುಂಬಗಳ 1.07 ಕೋಟಿ ಜನರು ಭಾಗವಹಿಸಿದರು. ಆಯೋಗವು ಸರ್ಕಾರದ ವಿವಿಧ ಇಲಾಖೆಗಳ ದತ್ತಾಂಶ ಸಹ ಓದಿ ವಿಶ್ಲೇಷನೆ ನಡೆಸಿದೆ.* 2005ರ ಸದಾಶಿವ ಆಯೋಗವು ಶೇ 15 ಮೀಸಲಾತಿಯ ಒಳಹಂಚಿಕೆ ಶಿಫಾರಸು ಮಾಡಿತ್ತು. ನಂತರ ಬೊಮ್ಮಾಯಿ ಸರ್ಕಾರದಲ್ಲಿ ಮಾಧುಸ್ವಾಮಿ ಸಮಿತಿಯು ನಾಲ್ಕು ಗುಂಪುಗಳಾಗಿ ವಿಭಜನೆ ಮಾಡಿ ಶೇ 17 ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ, ನಾಗಮೋಹನ್ದಾಸ್ ಆಯೋಗವು ಹೆಚ್ಚಿನ ಸಮೀಕ್ಷೆ ನಡೆಸಿ ಪ್ರಬಲ ಆಧಾರದೊಂದಿಗೆ ಹೊಸ ಶಿಫಾರಸುಗಳನ್ನು ಮಂಡಿಸಿದೆ.