Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
"ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಂದ ನಿವೃತ್ತಿ ಘೋಷಣೆ."
Authored by:
Akshata Halli
Date:
21 ಜನವರಿ 2026
➤ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.
ದೀರ್ಘಕಾಲದ ಮೊಣಕಾಲು ನೋವು ಮತ್ತು ಸಂಧಿವಾತದ (Arthritis) ಕಾರಣದಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
➤
ಸೈನಾ ಅವರು ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡುತ್ತಾ, ತಮ್ಮ ಮೊಣಕಾಲಿನ ಕಾರ್ಟಿಲೆಜ್ (Cartilage) ಸಂಪೂರ್ಣವಾಗಿ ಸವಿದುಹೋಗಿದ್ದು, ದಿನಕ್ಕೆ 8-9 ಗಂಟೆಗಳ ಕಾಲ ಅಭ್ಯಾಸ ಮಾಡುವುದು ಅಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. "ನನ್ನ ದೇಹವು ಈಗ ಆಟಕ್ಕೆ ಸ್ಪಂದಿಸುತ್ತಿಲ್ಲ, ಹಾಗಾಗಿ ನಾನು ಸ್ವಇಚ್ಛೆಯಿಂದ ಹಿಂದೆ ಸರಿಯುತ್ತಿದ್ದೇನೆ" ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.
➤
ಹರಿಯಾಣದ ಹಿಸಾರ್ ಮೂಲದ, ಪರುಪಳ್ಳಿ ಕಶ್ಯಪ್ ಅವರನ್ನು ವಿವಾಹವಾಗಿರುವ ಸೈನಾ ನೆಹ್ವಾಲ್ ಅವರು 17 ಮಾರ್ಚ್ 1990 ರಂದು ಜನಿಸಿದ್ದು, 2023ರ ಸಿಂಗಪುರ ಓಪನ್ನಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದ್ದಾರೆ.
➤
ಪ್ರಮುಖ ಜಯಗಳು ಮತ್ತು ದಾಖಲೆಗಳು:
=>
ವಿಶ್ವದ ನಂ. 1 ಶ್ರೇಯಾಂಕ:
2015ರಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು (ಪ್ರಕಾಶ್ ಪಡುಕೋಣೆ ನಂತರ ಎರಡನೇ ಭಾರತೀಯರು).
=>
ಒಲಿಂಪಿಕ್ಸ್ ಸಾಧನೆ:
2012ರ ಲಂಡನ್ ಒಲಿಂಪಿಕ್ಸ್ನಲ್ಲಿ
ಕಂಚಿನ ಪದಕ
ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯರಾದರು.
=>
ವಿಶ್ವ ಚಾಂಪಿಯನ್ಷಿಪ್:
2015ರಲ್ಲಿ ಬೆಳ್ಳಿ ಮತ್ತು 2017ರಲ್ಲಿ ಕಂಚಿನ ಪದಕ.
=>
ಕಾಮನ್ವೆಲ್ತ್ ಗೇಮ್ಸ್:
ಒಟ್ಟು 3 ಚಿನ್ನದ ಪದಕಗಳು ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ.
=>
ಸೂಪರ್ ಸೀರಿಸ್:
2009ರಲ್ಲಿ ಇಂಡೋನೇಷ್ಯಾ ಓಪನ್ ಗೆಲ್ಲುವ ಮೂಲಕ ಬಿಡಬ್ಲ್ಯುಎಫ್ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ಸೃಷ್ಟಿಸಿದ್ದರು.
➤ ಪ್ರಶಸ್ತಿ ಮತ್ತು ಗೌರವಗಳು:
1. 2009 -
ಅರ್ಜುನ ಪ್ರಶಸ್ತಿ
2. 2010
-
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
3. 2010
-
ಪದ್ಮಶ್ರೀ
4. 2016 -
ಪದ್ಮಭೂಷಣ
➤ ವೃತ್ತಿಜೀವನದ ಸಂಕ್ಷಿಪ್ತ ಅಂಕಿಅಂಶಗಳು:
=>
ಒಟ್ಟು ಅಂತರರಾಷ್ಟ್ರೀಯ ಪ್ರಶಸ್ತಿಗಳು:
24
=>
ಬಿಡಬ್ಲ್ಯುಎಫ್ ಸೂಪರ್ ಸೀರಿಸ್ ಕಿರೀಟಗಳು:
10
=>
ಬಿಡಬ್ಲ್ಯುಎಫ್ ಗ್ರಾನ್ಪ್ರಿ ಪ್ರಶಸ್ತಿಗಳು:
10
=>
ಏಷ್ಯನ್ ಗೇಮ್ಸ್ ಪದಕಗಳು:
2 ಕಂಚು
(2014, 2018)
➤
ಸೈನಾ ನೆಹ್ವಾಲ್ ಅವರು ಭಾರತೀಯ ಬ್ಯಾಡ್ಮಿಂಟನ್ ಲೋಕದ ಕ್ರಾಂತಿಕಾರಿ ಆಟಗಾರ್ತಿ. ಅವರ ಆತ್ಮಕಥೆ ಆಧಾರಿತ
'Saina'
ಎಂಬ ಬಯೋಪಿಕ್ 2021ರಲ್ಲಿ ಬಿಡುಗಡೆಯಾಗಿತ್ತು. ಮಹಿಳಾ ಕ್ರೀಡಾಲೋಕದಲ್ಲಿ ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದವರಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.
Take Quiz
Loading...